October 13, 2025
courtse_040225_1

ಕಾಸರಗೋಡು: ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವರ್ಕಾಡಿ ಉದ್ದಂಬೆಟ್ಟು ನಿವಾಸಿ ವಿಕ್ಟರ್ ಮೊಂತೆರೊ (43) ಎಂಬಾತನಿಗೆ ಕಾಸರಗೋಡು ತ್ವರಿತಗತಿ ವಿಶೇಷ ನ್ಯಾಯಾಲಯ 133 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

4.5 ಲಕ್ಷ ದಂಡವನ್ನೂ ವಿಧಿಸಿದ್ದು, ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ 18 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

ಸೆಪ್ಟೆಂಬರ್ 10, 2021 ರ ಮೊದಲು ನಡೆದ ಘಟನೆಯ ಆಧಾರದ ಮೇಲೆ ಮಂಜೇಶ್ವರ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.

About The Author

Leave a Reply