
ಬಿಹಾರದ ಹರ್ನೌತ್ ಬ್ಲಾಕ್‌ನ ಬಹದ್ದೂರ್‌ಪುರ ಗ್ರಾಮದಲ್ಲಿ ಭೀಕರ ಘಟನೆ ಬೆಳಕಿಗೆ ಬಂದಿದೆ. ಯುವತಿಯನ್ನು ಕ್ರೂರವಾಗಿ ಹತ್ಯೆ ಮಾಡಿರುವ ದುಷ್ಕರ್ಮಿಗಳು ಆಕೆಯ ಕಾಲಿಗೆ 12 ಮೊಳೆ ಹೊಡೆದು ಬರ್ಬರ ಕೃತ್ಯವೆಸಗಿದ್ದಾರೆ.



ಬುಧವಾರ ಬೆಳಿಗ್ಗೆ ಸ್ಥಳೀಯರು ಹೆದ್ದಾರಿ ಪಕ್ಕದ ಕಾಡಿನಲ್ಲಿ ಯುವತಿಯ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಂಪು ನೈಟಿ ಧರಿಸಿದ್ದ ಆಕೆ ಒಂದೇ ಕೈಗೆ ಬ್ಯಾಂಡೇಜ್ ಹಾಕಿದ್ದಳು. ಯುವತಿಯ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಯುವತಿ ಆಸ್ಪತ್ರೆಯಲ್ಲಿ ಮೃತಪಟ್ಟಿರಬಹುದು ಮತ್ತು ಪ್ರಕರಣ ತಪ್ಪಿಸಲು ಆಕೆಯ ದೇಹವನ್ನು ಇಲ್ಲಿ ಎಸೆಯಲಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಇನ್ನೊಂದ ಕಡೆ, ಮಾಟ-ಮಂತ್ರ ಅಥವಾ ನರಬಲಿ ಅಂಶವೂ ಇದಕ್ಕೆ ಸಂಬಂಧಿಸಿರಬಹುದು ಎಂಬ ವದಂತಿ ಹರಿದಾಡುತ್ತಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.