ಬಂಟ್ವಾಳ: ಕನ್ಯಾನ ಶ್ರೀ ಮಲರಾಯ ದೈವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಅರ್ಪಿಣಿಗುತ್ತು ಜಗನ್ನಾಥ ಶೆಟ್ಟಿ ಆಯ್ಕೆ

ಬಂಟ್ವಾಳ: ತಾಲೂಕಿನ ವಿಟ್ಲ ಕನ್ಯಾನ ಗ್ರಾಮದ ಶ್ರೀ ಮಲರಾಯ ದೈವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಅರ್ಪಿಣಿಗುತ್ತು ಜಗನ್ನಾಥ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.

ಉಳಿದಂತೆ ಸಮಿತಿ ಸದಸ್ಯರಾಗಿ ಪ್ರಧಾನ ಅರ್ಚಕರಾದ ಗಣೇಶ್‌ ಭಟ್‌, ಕಾರ್ಯದರ್ಶಿಯಾಗಿ ಗಂಗಾಧರ, ಕೋಶಾಧಿಕಾರಿಯಾಗಿ ರಾಜೇಶ್, ಪಧ್ಮನಾಭ ಶೆಟ್ಟಿ, ವನಿತಾ,‌ ಅಶ್ವಿನ್, ಸುರೇಶ್‌ ಬನಾರಿ, ಸುಲೋಚನ ಅವರು ನೇಮಕಗೊಂಡಿದ್ದಾರೆ. ನೂತನ ವ್ಯವಸ್ಥಾಪನಾ ಸಮಿತಿ ಶುಕ್ರವಾರ ಅಧಿಕಾರ ಸ್ವೀಕರಿಸಿದೆ.

ಈ ಸಂದರ್ಭ‌ ಕನ್ಯಾನ ಶ್ರೀ ಮಲರಾಯ ದೈವಸ್ಥಾನದ ಆಡಳಿತಾಧಿಕಾರಿಯಾಗಿದ್ದ ಅನಿಲ್‌ ಕುಮಾರ್ ಉಪಸ್ಥಿತರಿದ್ದರು.

Leave a Reply