20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಖತರ್ನಾಕ್ ಕಳ್ಳರು ಅರೆಸ್ಟ್

 20 ವರ್ಷಗಳಿಂದ ತಲೆ ಮರೆಸಿಕೊಂಡಿದ್ದಂತ ಇಬ್ಬರು ಖತರ್ನಾಕ್ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆ ಮೂಲಕ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ವ್ಯಾಪ್ತಿಯ ಕೈಗಾರಿಕಾ ಪ್ರದೇಶದಲ್ಲಿ ಕಳ್ಳತನ ಮಾಡಿ ನಾಗರಾಜು ಹಾಗೂ ಶ್ರೀನಿವಾಸಲು ಎಂಬುವರು ಸಿಕ್ಕಿ ಬಿದ್ದಿದ್ದರು. ಅವರನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದರು. ಜಾಮೀನಿನ ಮೇಲೆ ಹೊರಬಂದಿದ್ದಂತ ಇಬ್ಬರು, ಆ ಬಳಿಕ ನಾಪತ್ತೆಯಾಗಿದ್ದರು.

ಉನ್ನತ ವ್ಯಾಸಂಗ ಮಾಡಿದ್ದಂತ ಆರೋಪಿಗಳಿಬ್ಬರು, ಪೊಲೀಸರಿಗೆ ಸಿಕ್ಕೇ ಇರಲಿಲ್ಲ. ಆಂಧ್ರಪ್ರದೇಶದಲ್ಲಿ ಹೋಂ ಗಾರ್ಡ್ ಕೆಲಸವನ್ನು ಶ್ರೀನಿವಾಸಲು ಮಾಡುತ್ತಿದ್ದರೇ, ಮತ್ತೋರ್ವ ಆರೋಪಿ ನಾಗರಾಜು ಬ್ಯಾಂಕ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದನು. ಸಮನ್ಸ್ ನೀಡಿದರೂ ಆರೋಪಿಗಳು ಸಿಗದೇ ಪೊಲೀಸರು ಕನ್ ಫ್ಯೂಸ್ ಗೆ ಒಳಗಾಗಿದ್ದರು. ಇದೀಗ ಇಬ್ಬರು ಆರೋಪಿಗಳ ಸುಳಿವು ಪಡೆದು, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಖತರ್ನಾಕ್ ಕಳ್ಳರನ್ನು ಬಂಧಿಸಿದ್ದಾರೆ.

Leave a Reply