October 12, 2025
th

ಉಡುಪಿ: ಪಾರ್ಸೆಲ್‌ ಆಮಿಷಕ್ಕೆ ಒಳಗಾದ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ.

ಮಣಿಪಾಲದ ಕೆಎಂಸಿಯಲ್ಲಿ ಎಲೆಕ್ಟ್ರಿಷಿಯನ್‌ ಆಗಿ ಕೆಲಸ ಮಾಡಿಕೊಂಡಿರುವ ಮಧುಕಿರಣ್‌ ಅವರ ಇನ್‌ಸ್ಟಾಗ್ರಾಂ ಖಾತೆಗೆ ಡಿಸೆಂಬರ್‌ನಲ್ಲಿ eta_wat ಎಂಬ ಇನ್‌ಸ್ಟಾಗ್ರಾಂ ಖಾತೆಯನ್ನು ಹೊಂದಿರುವ ಅಪರಿಚಿತ ವ್ಯಕ್ತಿಯಿಂದ ಸಂದೇಶ ಬಂದಿತ್ತು.

ಅನಂತರ ಚಾಟ್‌ ಮುಖಾಂತರ ಇಬ್ಬರೂ ಪರಸ್ಪರ ಪರಿಚಯವಾಗಿತ್ತು.

ಮಧುಕಿರಣ್‌ ಅವರು ತನ್ನ ಮನೆಯ ವಿಳಾಸವನ್ನು ಆ ವ್ಯಕ್ತಿಗೆ ನೀಡಿದ್ದು, ಸ್ವಲ್ಪ ದಿನದ ಅನಂತರ ಮಾಫ‌ು ಅಮೂಂಗ್‌ ಎಂಬ ವ್ಯಕ್ತಿಯು ಮೊಬೈಲ್‌ನಿಂದ ಕರೆಮಾಡಿ ನಿಮ್ಮ ಹೆಸರಿನಲ್ಲಿ ಪಾರ್ಸೆಲ್‌ ಬಂದಿದೆ. ಅದನ್ನು ಪಡೆಯಲು ನೀವು ಕಸ್ಟಮ್‌ ಕ್ಲಿಯರೆನ್ಸ್‌ ಮತ್ತು ಸೆಕ್ಯೂರಿಟಿ ಚಾರ್ಜಸ್‌ಗಾಗಿ Ilota P Jakha ಅವರಿಗೆ 1,30,000 ರೂ.ಹಣವನ್ನು ನೀಡಬೇಕೆಂದು ಹೇಳಿದ್ದರು. ಅದರಂತೆ ಮಧುಕಿರಣ್‌ ಅವರು ಜ.22ರಿಂದ 27ರವರೆಗೆ ಹಂತ-ಹಂತವಾಗಿ ಅವರ ಕೆನರಾ ಬ್ಯಾಂಕ್‌ ಅಕೌಂಟ್‌ ಹಾಗು ಎಸ್‌ಬಿಐ ಬ್ಯಾಂಕ್‌ ಅಕೌಂಟ್‌ನಿಂದ ಕ್ರಮವಾಗಿ 90,000 ರೂ. ಹಾಗೂ 40,000ರೂ.ಗಳನ್ನು Ilota Jakha ಅವರಿಗೆ ಗೂಗಲ್‌ ಪೇ ಹಾಗೂ ಫೋನ್‌ ಪೇ ಮುಖಾಂತರ ವರ್ಗಾಯಿಸಿದ್ದರು.

ಇದಾದ ಒಂದು ದಿನದ ಬಳಿಕ onia Delhi Parcel Office ಹಾಗೂ Sonia Rapid Courier Mumbai ನಿಂದ ಕರೆ ಮಾಡಿ ನಿಮ್ಮ ಪೌಂಡ್‌ ಕರೆನ್ಸಿಯನ್ನು ಭಾರತೀಯ ಹಣದೊಂದಿಗೆ ವರ್ಗಾವಣೆ ಮಾಡಲು ನೀವು 1,50,000 ರೂ.ಪಾವತಿಸಬೇಕು ಎಂದು ತಿಳಿಸಿದ್ದರು. ಅದಕ್ಕೆ ಮಧುಕಿರಣ್‌ ಅವರು ಮಾ.1ರಂದು 90,000ರೂ. ಮೊತ್ತವನ್ನು ಚೆಕ್‌ ಮೂಲಕ ರೋಹಿತ್‌ ಕುಮಾರ್‌ ರಿಯಾಂಗ್‌ ಅವರ ಅಕೌಂಟ್‌ ಸಂಖ್ಯೆಗೆ ಹಾಗೂ 60,000 ರೂ.ಗಳನ್ನು ಅವರ ಫೋನ್‌ ಪೆ ಸಂಖ್ಯೆಗೆ ಪಾವತಿಸಿದ್ದರು. ಇದಾದ ಅನಂತರವೂ ಮತ್ತೆ Sonia Rapid Courier Mumbai ಕರೆ ಮಾಡಿ ಸೆಕ್ಯೂರಿಟಿ ಚಾರ್ಜ್‌ಗಾಗಿ ಪುನಃ 60,000ರೂ. ಕೇಳಿದಾಗ ತಾನು ಮೋಸ ಹೋಗಿರುವ ಬಗ್ಗೆ ಅರಿವಾಗಿದ್ದು, ಕೂಡಲೇ ನಗರ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

About The Author

Leave a Reply