October 28, 2025
WhatsApp Image 2025-03-10 at 3.58.21 PM

ಪುತ್ತೂರು: ಗ್ಯಾರೇಜೊಂದರಲ್ಲಿ ರಿಪೇರಿಗಾಗಿ ನಿಲ್ಲಿಸಿದ್ದ ಯಮಹಾ R X 100 ಬೈಕ್‌ನ್ನು ಗ್ಯಾರೇಜ್ ಶೆಟರ್‌ನ ಬೀಗ ಒಡೆದು ಕಳವು ಮಾಡಿರುವ ಘಟನೆ ಹಾರಾಡಿಯಲ್ಲಿ ನಡೆದಿದೆ.

ಸಾಲ್ಮರ ನಿವಾಸಿ ಜಗದೀಶ್ ಆಚಾರ್ಯ ತನ್ನ ಬೈಕ್‌ನ್ನು ಹಾರಾಡಿ ಗ್ಯಾರೇಜೊಂದರಲ್ಲಿ ರಿಪೇರಿಗಾಗಿ ನಿಲ್ಲಿಸಿದ್ದರು. ಮಾ.10ರಂದು ಬೈಕ್ ತೆಗೆದುಕೊಂಡು ಹೋಗುವ ಕುರಿತು ಗ್ಯಾರೇಜ್ ಮಾಲಕರೊಂದಿಗೆ ಮಾತುಕತೆ ನಡೆದಿತ್ತು. ಆದರೆ ಮಾ.9 ರಂದು ಬೆಳಗ್ಗೆ ಗ್ಯಾರೇಜ್‌ನ ಶೆಟರ್ ಬೀಗ ಒಡೆದಿರುವುದನ್ನು ಗಮನಿಸಿದ ಗ್ಯಾರೇಜ್ ಮಾಲಕರು ಒಳಗೆ ನೋಡಿದಾಗ ಯಮಹಾ R X 100 ಬೈಕ್ ಕಳವಾಗಿರುವುದು ಬೆಳಕಿಗೆ ಬಂದಿದೆ.

About The Author

Leave a Reply