ಉಪ್ಪಿನಂಗಡಿ: ಕೆ.ಎಸ್‌.ಆರ್‌.ಟಿ.ಸಿ ಬಸ್- ಲಾರಿ ನಡುವೆ ಭೀಕರ ಅಪಘಾತ; ಹಲವರಿಗೆ ಗಾಯ

ಉಪ್ಪಿನಂಗಡಿ: ಕೆ.ಎಸ್‌.ಆರ್‌.ಟಿ.ಸಿ ಬಸ್ ಹಾಗೂ ಲಾರಿಯು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಶಾಲಾ ಮಕ್ಕಳ ಸಹಿತ ಬಸ್ಸಿನಲ್ಲಿದ್ದ ಆರು ಮಂದಿ ಗಾಯಗೊಂಡ ಘಟನೆ ಉಪ್ಪಿನಂಗಡಿ ಬಳಿಯ ರಾಷ್ಟ್ರೀಯ ಹೆದ್ದಾರಿಯ ಅಂಡರ್‌ಪಾಸ್ ಬಳಿ ಸಂಭವಿಸಿದೆ.

ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಹೋಗುತ್ತಿದ್ದ ಬಸ್ ತಿರುವು ಪಡೆದು ಬಸ್‍ನಿಲ್ದಾಣಕ್ಕೆಂದು ಅಂಡರ್‌ಪಾಸ್‌ನಿಂದ ತುಸು ಮುಂದೆ ಹೋಗುತ್ತಿದ್ದಂತೆ ಮಂಗಳೂರು ಕಡೆಯಿಂದ ಹಾಸನ ಕಡೆಗೆ ಸರ್ವೀಸ್ ರಸ್ತೆ ಮೂಲಕ ಬರುತ್ತಿದ್ದ ಲಾರಿ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.

ಬಸ್ಸಿನಲ್ಲಿದ್ದ ಮುದಾಸ್ಸೀರ್ (20) , ಅಜ್ಮಲ್ ಹುಸೇನ್ (19) , ಕೀರ್ತನ್ (20) , ಅಫ್ತಾರ್‍ಖಾನ್ (19) , ಫಾತಿಮಾ (19) ,  ಉನೈಸ್(19) ಎಂಬವರು ಗಾಯಗೊಂಡು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಹಳೆನೇರೆಂಕಿ ನಿವಾಸಿ ಕೀರ್ತನ್‌ಗೆ ಗಂಭೀರ ಗಾಯವಾಗಿದ್ದು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಗಾಗಿದೆ. ಈ ಘಟನೆ ಕುರಿತು ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply