October 13, 2025
WhatsApp Image 2025-03-16 at 8.46.21 AM

ಮಂಗಳೂರು : ಬಾಲಕನೊಬ್ಬ ಪ್ಲ್ಯಾಟ್ ನ 5ನೇ ಮಹಡಿಯಿಂದ ಕೆಳಗೆ ಬಿದ್ದು ಸಾವನಪ್ಪಿದ ಘಟನೆ ಮೇರಿಹಿಲ್ ನಲ್ಲಿ ಶನಿವಾರ ನಡೆದಿದೆ.

ಮೃತ ಬಾಲಕನನ್ನು ಇರಾ ಕಿನ್ನಿಮಜಲು ಬೀಡು ಸುದೇಶ್ ಭಂಡಾರಿ ಅವರ ಪುತ್ರ ಸಮರ್ಜಿತ್ (13) ಎಂದು ಗುರುತಿಸಲಾಗಿದೆ.  ಕೂಡಲೇ ಮನೆಯವರು ಬಾಲಕನನ್ನು ಎಜೆ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ತಲೆ ಮತ್ತು ಬೆನ್ನು ಮೂಳೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅಷ್ಟರಲ್ಲಿಯೇ ಮೃತಪಟ್ಟಿದ್ದಾನೆ.

ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರು, ಅಪಾರ್ಟೆಂಟಿನ ಇತರ ಕುಟುಂಬ ಸದಸ್ಯರು ಸೇರಿದ್ದು ಎಲ್ಲರೂ ಶಾಕ್ ಗೆ ಒಳಗಾಗಿದ್ದರು. ಮನೆಯವರು ತೀವ್ರ ಆಘಾತಕ್ಕೆ ಒಳಗಾಗಿದ್ದರು. ಕಾವೂರು ಠಾಣೆಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ. ಈತ ಮೇರಿಹಿಲ್ ನ ಖಾಸಗಿ ಶಾಲೆಯೊಂದರಲ್ಲಿ 7ನೇ ತರಗತಿ ಕಲಿಯುತ್ತಿದ್ದ.

About The Author

Leave a Reply