February 15, 2026
WhatsApp Image 2025-03-11 at 8.59.11 AM

ಳಗಾವಿ: ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿಯೊಂದು ನಡೆದಿದ್ದಾಗಿ ತಿಳಿದು ಬಂದಿದೆ. ಅನ್ಯಕೋಮಿನ ವ್ಯಕ್ತಿಯೊಬ್ಬರ ಮೇಲೆ ಯುವಕರ ಗುಂಪೊಂದು ಹಲ್ಲೆ ಮಾಡಿರುವುದಾಗಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ ದಾಖಲಾಗಿದೆ. ಅಲ್ಲಾವುದ್ದೀನ್ ಫೀರ್ ಜಾಧೆ ಎಂಬುವರ ಮೇಲೆ ನಮ್ಮ ಸಮಾಜದ ಯುವತಿ ಜೊತೆಗೆ ಏಕೆ ಮಾತನಾಡುತ್ತೀಯ ಅಂತ ಹೇಳಿ ಯುವಕರ ಗುಂಪೊಂದು ಹಲ್ಲೆ ಮಾಡಲಾಗಿದೆ. ಅಲ್ಲಾವುದ್ದೀನ್ ಹರಿದ ಬಟ್ಟೆಯಲ್ಲೇ ಠಾಣೆಗೆ ತೆರಳಿ ದೂರು ನೀಡಿದ್ದರ ಪರಿಣಾಮ ಪ್ರಕರಣ ದಾಖಲಾಗಿದೆ.

ಬೆಳಗಾವಿ ಗ್ರಾಮಾಂತರ ಠಾಣೆಯ ಪೊಲೀಸರು ಗ್ಯಾಂಗ್ ವಿರುದ್ಧ ದೂರು ದಾಖಲಿಸಿಕೊಂಡು, ತಡರಾತ್ರಿಯೇ ನಾಲ್ವರು ಯುವಕನ್ನು ಬಂಧಿಸಿದ್ದಾರೆ. ಸಂತೋಷ್ ಜಾಧ್ ಸಮಿತ್, ವೀರೇಶ್, ಜಯ ಎಂಬುದಾಗಿ ಗುರುತಿಸಲಾಗಿದೆ. ಪರಾರಿಯಾಗಿರುವಂತ ಮತ್ತಿಬ್ಬರಿಗಾಗಿ ಪೊಲೀಸರು ಹುಟುಕಾಟವನ್ನು ಮುಂದುವರೆಸಿದ್ದಾರೆ.

About The Author

Leave a Reply