
ಚಿಕ್ಕಮಂಗಳೂರಲ್ಲಿ ಯೂಥ್ ಕಾಂಗ್ರೆಸ್ ಅಧ್ಯಕ್ಷನ ಗುಂಡಾಗಿರಿ ನಡೆದಿದ್ದು, ರಾತ್ರಿ 1 ಗಂಟೆಗೆ ಎಣ್ಣೆ ಕೊಡಲಿಲ್ಲ ಎಂದು ಬಾರ್ ಕ್ಯಾಶಿಯರ್ ಮೇಲೆ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಾಂಗ್ರೆಸ್ ಅಧ್ಯಕ್ಷ ವಿಜಯಾನಂದ ವಿರುದ್ಧ ಈ ಒಂದು ಆರೋಪ ಕೇಳಿ ಬರುತ್ತಿದೆ.



ಸದಸ್ಯ ರಾಶ್ವೀಕ್ ಸೇರಿದಂತೆ ಗುಂಪು ಕಟ್ಟಿಕೊಂಡು ಹಲ್ಲೆ ನಡೆಸಲಾಗಿದೆ. ರಾತ್ರಿ 1 ಗಂಟೆಗೆ ಎಣ್ಣೆ ಕೊಡಲಿಲ್ಲ ಎಂದು ಗುಂಪು ಕಟ್ಟಿಕೊಂಡು ಹಲ್ಲೆ ಮಾಡಿದ್ದಾರೆ. ಮರುದಿನ ಬೆಳಗ್ಗೆ ಬಂದು ಬಾರ್ ಕ್ಯಾಶಿಯರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕ್ಯಾಶಿಯರ್ ಮೇಲೆ ಹಲ್ಲಿಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಹಲ್ಲೆ ಮಾಡಿದರೂ ಕೂಡ ಕ್ಯಾಶಿಯರ್ ದೂರು ನೀಡಿಲ್ಲ. ದೂರು ನೀಡಿದರೆ ಪ್ರಕರಣ ದಾಖಲಿಸುತ್ತೇವೆ ಎಂದು ಪೊಲೀಸರು ಹೇಳುತ್ತಿದ್ದಾರೆ ಆದರೆ ಕ್ಯಾಶರ್ ಮಾತ್ರ ದೂರು ನೀಡಿಲ್ಲ.