
ಉಳ್ಳಾಲ: ಸಯ್ಯಿದ್ ಮದನಿ ಅರಬಿಕ್ ಟ್ರಸ್ಟ್ ಮದ್ರಸಗಳಲ್ಲಿ 2024-25 ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಕಂಝುಲ್ ಉಲೂಮ್ ಮದ್ರಸದ ವಿದ್ಯಾರ್ಥಿಗಳಾದ ಐದನೇ ತರಗತಿಯ ಮರಿಯಮ್ ಅಲೀನ (557) ಮತ್ತು ನಫೀಸ ಹಯ (554) ಹಾಗೂ ಏಳನೇ ತರಗತಿಯ ಮುಹಮ್ಮದ್ ಅಸಿಲ್ (563) ಅಂಕಗಳೊಂದಿಗೆ ಸಯ್ಯದ್ ಮದನಿ ಅರಬಿಕ್ ಟ್ರಸ್ಟ್ ನ 33 ಮದ್ರಸಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಕ್ರಮವಾಗಿ ಸ್ಥಾನ ಗಿಟ್ಟಿಸಿ ಕೊಂಡಿದ್ದಾರೆ. ಎಂದು ಮದರಸ ಮುಖ್ಯ ಉಪಾಧ್ಯಾಯರಾದ ಅಮೀನ್ ಮಖ್ದೂಮಿ ಪತ್ರಿಕೆಗೆ ತಿಳಿಸಿದ್ದಾರೆ.



ಎಲ್ಲಾ ವಿದ್ಯಾರ್ಥಿಗಳಿಗೂ ಮುಹಿಯುದ್ದೀನ್ ಜುಮಾ ಮಸೀದಿ ಮೇಲಂಗಡಿ. ಇದರ ಅಧ್ಯಕ್ಷರಾದ ಮುಸ್ತಫಾ ಅಬ್ದುಲ್ಲ ಅಭಿನಂದನೆ ಸಲ್ಲಿಸಿದ್ದಾರೆ..