August 30, 2025
WhatsApp Image 2025-03-21 at 5.15.35 PM

ಬಿಜೆಪಿಯ 18 ಶಾಸಕರನ್ನು ವಿಧಾನಸಭೆಯಿಂದ ಅಮಾನತು ಮಾಡಿ ಸ್ಪೀಕರ್ ಯು.ಟಿ.ಖಾದರ್ ಆದೇಶ ಹೊರಡಿಸಿದ್ದಾರೆ.

ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಹಿನ್ನೆಲೆಯಲ್ಲಿ ಬಿಜೆಪಿಯ 18 ಶಾಸಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಮಾಡಿ ಆದೇಶ ಹೊರಡಿಸಿದ್ದಾರೆ.

6 ತಿಂಗಳ ಕಾಲ ಬಿಜೆಪಿಯ 18 ಶಾಸಕರನ್ನು ಅಸಸ್ಪೆಂಡ್ ಮಾಡಲಾಗಿದೆ. ತಕ್ಷಣ ವಿಧಾನಸಭೆಯಿಂದ ಹೊರ ಹೋಗುವಂತೆ ಸ್ಪೀಕರ್ ಸೂಚಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪೀಕರ್ ಪೀಠ ಗೌರವಯುತವಾದದ್ದು, ಆದರೆ ವಿಧೇಯಕಗಳನ್ನು ಹರಿದು ಸ್ಪೀಕರ್ ಮೇಲೆ ಎಸೆದು, ಸಿಡಿ ಪ್ರದರ್ಶನ ಮಾಡಿ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಹಿನ್ನೆಲೆಯಲ್ಲಿ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಲಾಗಿದೆ.

ಶಾಸಕರಾದ ದೊಡ್ಡನಗೌಡ ಪಾಟೀಲ್, ಅಶ್ವತ್ಥನಾರಾಯಣ, ಭರತ್ ಶೆಟ್ಟಿ, ಶರಣು ಸಲಗರ, ಬಿ.ಸುರೇಶ್ ಗೌಡ, ಮುನಿರತ್ನ,ಉಮಾನಾಥ್ ಕೋಟ್ಯಾನ್, ಬಿ.ಪಿ.ಹರೀಶ್, ಧೀರಜ್ ಮುನಿರಾಜು, ಶೈಲೇಂದ್ರ ಬೆಲ್ದಾಳೆ, ಬಸವರಾಜ್ ಮತ್ತಿಮೂಡ ಸೇರಿದಂತೆ 18 ಶಾಸಕರನ್ನು ಸಸ್ಪೆಂಡ್ ಮಾಡಲಾಗಿದೆ.

ದೊಡ್ಡನಗೌಡ ಪಾಟೀಲ್

ಅಶ್ವಥನಾರಾಯಣ

ಎಸ್ ಆರ್ ವಿಶ್ವನಾಥ್

ಬೈರತಿ ಬಸವರಾಜು

ಎಮ್ ಆರ್ ಪಟೇಲ್

ಚನ್ನಬಸಪ್ಪ

ಉಮಾನಾಥ್ ಕೋಟ್ಯನ್

ಸುರೇಶ್ ಗೌಡ

ಶೈಲೇಂದ್ರ ಬೆಲ್ದಾಳೆ

ಶರಣು ಸಲಗಾರ್

ಸಿಕೆ ರಾಮಮೂರ್ತಿ

ಯಶ್ಪಾಲ್ ಸುವರ್ಣ

ಹರಿಶ್ ಬಿ ಪಿ

ಭರತ್ ಶೆಟ್ಟಿ

ಬಸವರಾಜ ಮತ್ತಿಮೂಡ್

ಧೀರಜ್ ಮುನಿರಾಜು

ಮುನಿರತ್ನ

ಚಂದ್ರು ಲಮಾಣಿ

About The Author

Leave a Reply