ಮುಲ್ಕಿ: ಬೈಕ್ ಡಿಕ್ಕಿ, ಪಾದಾಚಾರಿ ಗಂಭೀರ

ಮುಲ್ಕಿ:  ಪಾದಾಚಾರಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡ ಪಾದಾಚಾರಿ ಆಸ್ಪತ್ರೆಗೆ ದಾಖಲಾಗಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣದ ಪೆಟ್ರೋಲ್ ಬಂಕ್ ಬಳಿ ನಡೆದಿದೆ.

ಗಾಯಗೊಂಡ ಪಾದಾಚಾರಿ ಯನ್ನು ಮುಲ್ಕಿ ಒಡೆಯರ ಬೆಟ್ಟು ನಿವಾಸಿ ಸೋಮನಾಥ ಕರ್ಕೇರ (72) ಎಂದು ಗುರುತಿಸಲಾಗಿದೆ.

ಗಾಯಾಳು ಸೋಮನಾಥ ಕರ್ಕೇರ ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಪೆಟ್ರೋಲ್ ಬಂಕ್ ಬಳಿ ಹೆದ್ದಾರಿ ರಸ್ತೆ ದಾಟುತ್ತಿದ್ದಾಗ ಮಂಗಳೂರು ಕಡೆಯಿಂದ ಉಡುಪಿ ಜಿಲ್ಲೆಯ ಉಚ್ಚಿಲ ಕಡೆಗೆ ಹೋಗುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ.

Leave a Reply