ಬುರ್ಖಾ ಧರಿಸಿದರೆ ಸತ್ತಮೇಲೆ ಸ್ವರ್ಗ : ಶಾಲಾ ವಿದ್ಯಾರ್ಥಿನಿಯ ಭಾಷಣ ವೈರಲ್

ಚಾಮರಾಜನಗರ : ರಾಜ್ಯದಲ್ಲಿ ಮತ್ತೆ ಮತಾಂತರ ಆರೋಪ ಕೇಳಿ ಬರುತ್ತಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ಚಾಮರಾಜನಗರದಲ್ಲಿ ಆಘಾತಕಾರಿ ಘಟನೆ ಒಂದು ನಡೆದಿದ್ದು HUDA ಖಾಸಗಿ ಶಾಲೆಯೊಂದರಲ್ಲಿ ವಸ್ತು ಪ್ರದರ್ಶನದ ವೇಳೆ ವಿದ್ಯಾರ್ಥಿನಿ, ಬುರ್ಖಾ ಧರಿಸಿದರೆ ಸತ್ತ ಮೇಲೆ ನಮಗೆ ಏನು ಆಗಲ್ಲ. ಆದರೆ ತುಂಡು ಬಟ್ಟೆ ಧರಿಸಿದರೆ ನಾವು ಸತ್ತ ಮೇಲೆ ನರಕಕ್ಕೆ ಹೋಗುತ್ತೇವೆ. ಹಾವು ಚೇಳುಗಳು ನಮ್ಮ ದೇಹವನ್ನು ತಿನ್ನುತ್ತವೆ ಎಂದು ಹೇಳಿಕೆ ನೀಡಿದ್ದಾಳೆ. ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಹೌದು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಆಘಾತಕಾರಿ ಘಟನೆ ಬೆಳಗೆಗೆ ಬಂದಿದೆ. ಚಾಮರಾಜನಗರದ ಖಾಸಗಿ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ವೇಳೆ, ಬುರ್ಖಾ ಧರಿಸಿದರೆ ಸತ್ತ ಮೇಲೆ ನಮಗೆ ಏನು ಆಗಲ್ಲ. ತುಂಡು ಉಡುಗೆ ಕೊಟ್ಟರೆ ನರಗಕ್ಕೆ ಹೋಗುತ್ತಾರೆ ನಿಮ್ಮ ದೇಹವನ್ನು ಹಾವು ಚೇಳು ತಿನ್ನುತ್ತವೆ ಎಂದು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿನಿ ಈ ರೀತಿ ಹೇಳಿಕೆ ನೀಡಿದ್ದಾಳೆ. ಮಕ್ಕಳು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಧರ್ಮದ ಅಮಲು ಏರಿಸಿಕೊಳ್ಳುತ್ತಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ.ಬ್ರೈನ್ ವಾಶ್ ಆರೋಪದ ಬಗ್ಗೆ ಸ್ಥಳೀಯರು ಟ್ವೀಟ್ ಮಾಡಿದ್ದಾರೆ.

ಈ ಒಂದು ಘಟನೆಗೆ ಸಂಬಂಧಿಸಿದಂತೆ ಚಾಮರಾಜನಗರದ ಜಿಲ್ಲಾ ಡಿಡಿಪಿಐ ರಾಮಚಂದ್ರ ರಾಜೆ ಅವರು, ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ವರದಿ ನೀಡಲು ಬಿಇಒ ಡಿಡಿಪಿಐ ಕಚೇರಿಯ ಅಧಿಕಾರಿಗಳ ತಂಡ ರಚನೆ ಆಗಿದೆ.ಆದಷ್ಟು ಬೇಗ ಶಾಲೆಗೆ ಭೇಟಿ ನೀಡಿ ವರದಿ ನೀಡಲು ಅಧಿಕಾರಿಗಳ ತಂದಕ್ಸ್ ತಿಳಿಸಲಾಗಿದೆ ಎಂದು ಅವರು ತಿಳಿಸಿದರು.

Leave a Reply