November 8, 2025
WhatsApp Image 2025-03-29 at 1.31.09 PM

ಮಂಗಳೂರು: ಮಂಗಳೂರು ವಿವಿಯಲ್ಲಿ ಶನಿವಾರ 43ನೇ ವಾರ್ಷಿಕ ಘಟಿಕೋತ್ಸವ ನಡೆಯಲಿದ್ದು, ಈ ಬಾರಿಯೂ ಉದ್ಯಮಿಗಳೇ ಗೌರವ ಡಾಕ್ಟರೇಟ್‌ಗೆ ಆಯ್ಕೆಯಾಗಿದ್ದಾರೆ.

ರಿಯಲ್‌ ಎಸ್ಟೇಟ್‌ ಉದ್ಯಮಿ ರೋಹನ್‌ ಮೊಂತೇರೋ, ಮುಂಬೈ ಉದ್ಯಮಿ ಕನ್ಯಾಡಿ ಸದಾಶಿವ ಶೆಟ್ಟಿ ಮತ್ತು ಎಸ್‌ಸಿಡಿಸಿಸಿ ಬ್ಯಾಂಕ್‌
ಅಧ್ಯಕ್ಷ ಎಂ.ಎನ್‌.ರಾಜೇಂದ್ರ ಕುಮಾರ್‌ ಅವರನ್ನು ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ.
ಗೌರವ ಡಾಕ್ಟರೇಟ್‌ಗೆ 15ಮಂದಿ ಸಾಧಕರ ಹೆಸರನ್ನು ಆಯ್ಕೆ ಮಾಡಿ, ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ ಶಿಫಾರಸ್ಸು. ಮಾಡಲಾಗಿತ್ತು. ಅದರಂತೆ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮೂವರನ್ನು ಆಯ್ಕೆ ಮಾಡಿ ಈ ಮೂವರನ್ನು ಕುಲಾಧಿಪತಿಗಳು ಆಯ್ಕೆ ಮಾಡಿದ್ದಾರೆ.

ಈ ಬಾರಿ 64ಡಾಕ್ಟರ್‌ ಆಫ್‌ ಫಿಲಾಸಫಿ (ಪಿಎಚ್‌ಡಿ) ಪದವಿಗಳು, 54 ಚಿನ್ನದ ಪದಕಗಳು ಮತ್ತು 56 ನಗದು ಬಹುಮಾನಗಳನ್ನು ನೀಡಲಿದೆ. 64
ಪಿಎಚ್‌ಡಿಗಳಲ್ಲಿ 12 ಕಲೆ, 38 ವಿಜ್ಞಾನ, 11ವಾಣಿಜ್ಯ, ಮತ್ತು ಮೂವರು ಶಿಕ್ಷಣದಲ್ಲಿ ಪಿಎಚ್‌ಡಿ ಸ್ವೀಕರಿಸಲಿದ್ದಾರೆ. ಕರ್ನಾಟಕದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಮತ್ತು ಸಹ – ಕುಲಪತಿ ಡಾ. ಎಂ. ಸಿ ಸುಧಾಕರ್‌ ಉಪಸ್ಥಿತರಿರುತ್ತಾರೆ.

ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಉಪಾಧ್ಯಕ್ಷ ಮತ್ತು ಮುಂಬೈನ ಸೋಮಿಯಾ ವಿದ್ಯಾವಿಹಾರ್‌ ವಿವಿಯ ಉಪಕುಲಪತಿ ಪ್ರೊ. ವಿ.ಎನ್‌.
ರಾಜಶೇಖರನ್‌ ಪಿಳ್ಳೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಈ ಬಾರಿಯ ಮುಖ್ಯ ಸಮಾರಂಭದಲ್ಲಿ ಎಲ್ಲಾ ಪಿಎಚ್‌ಡಿ ಪದವಿಗಳು ಮತ್ತು ಚಿನ್ನದ ಪದಕಗಳನ್ನು ಗಣ್ಯರು ಪ್ರದಾನ ಮಾಡಲಿದ್ದಾರೆ ಎಂದು ಹೇಳಿದರು.

About The Author

Leave a Reply