
ಮೂಡುಬಿದಿರೆ: ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದಾರೆಂದು ತಿಳಿದು ಸಕ್ರಮ ಗೋಸಾಗಾಟದ ಮೇಲೆ ದಾಳಿ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಮೂಡುಬಿದ್ರೆಯಲ್ಲಿ ನಡೆದಿದೆ.



ಮೂಡುಬಿದಿರೆಯ ಕೂಸಪ್ಪ ಎಂಬವರು ಕಾರ್ಕಳದ ಬಜಗೋಳಿಯ ತನ್ನ ಪರಿಚಯದವರ ಮನೆಯಿಂದ ಗೀರ್ ತಳಿಯ ಹೋರಿಯೊಂದನ್ನು ಸಂಗಬೆಟ್ಟುವಿನ ಅಬ್ದುಲ್ ರೆಹ್ಮಾನ್ ಅವರ ವಾಹನ ಗೊತ್ತುಪಡಿಸಿ ಮೂಡುಬಿದ್ರೆಯತ್ತ ತರುತ್ತಿದ್ದರು. ಈ ಸಂದರ್ಭ ಅವರ ಮೇಲೆ ಹಲ್ಲೆ ನಡೆಸಿ ವಾಹನ ಪುಡಿ ಮಾಡಲಾಗಿತ್ತು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಂದಲೆ ನಿವಾಸಿ ಸುರೇಶ್ ಶೆಟ್ಟಿ ಹಾಗೂ ಸುರತ್ಕಲ್ ನ ಧನರಾಜ್ ಬಂಧಿತ ಆರೋಪಿಗಳು. ಇತರ ಐದು ಮಂದಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.