October 13, 2025
WhatsApp Image 2025-03-31 at 2.31.59 PM

ಸಕಲೇಶಪುರ: ಸಕಲೇಶಪುರದ ಕೊಲ್ಲಹಳ್ಳಿ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸಂಭ್ರಮದಿಂದ ಈದ್‌‌ ಉಲ್ ಫಿತರ್ ಹಬ್ಬವನ್ನು ಆಚರಿಸಲಾಯಿತು

ಮಸೀದಿಯ ಖತೀಬರಾದ ಜನಾಬ್ ಬದ್ದುದೀನ್ ದಾರಿಮಿ ಉಸ್ತಾದ್ ರವರ ನೇತ್ರತ್ವದಲ್ಲಿ ಈದ್ ನಮಾಝ್ ನಿರ್ವಹಿಸಲಾಯಿತು ಸಹೋದರರಾದ ನಾವೆಲ್ಲರೂ ಸಹೋದರತೆಯಿಂದ ಎಲ್ಲರ ಜೋತೆಯಲ್ಲಿ ಪ್ರೀತಿ ‌ಪ್ರೇಮದಿಂದ ಇರಬೇಕು ಮತ್ತು ಎಲ್ಲಾ ದುಷ್ಟಚಾಟ ಗಳಿಂದ ದೂರವಿದು ಅಲ್ಲಾವುವಿನ ಪ್ರೀತಿಗೆ ಪಾತ್ರರಾಗಿರೆಂದು ಖತೀಬರಾದ ಬದ್ರುದೀನ್ ದಾರಿಮಿ ಉಸ್ತಾದ್ ರವರು ತಮ್ಮ ಈದ್ ಸಂದೇಶದಲ್ಲಿ ‌ನುಡಿದರು.

ರಂಜಾನ್ ತಿಂಗಳ ನಮಾಜ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಮಸೀದಿಯಲ್ಲಿ ಬಂದು ನಮಾಝ್ ನಿರ್ವಹಿಸಿದ ಹಲವು ಮಕ್ಕಳನ್ನು ಹಾಗು ಮಸೀದಿಯ ಧನಸಹಾಯವನ್ನು ಸಂಗ್ರಹಿಸಿದ ಹಸೈನಾರ್, ಮತ್ತು ಮಸೀದಿಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಗುರುಗಳಾದ ಖತೀಬರಾದ ಜನಾಬ್ ಬದ್ರುದೀನ್ ದಾರಿಮಿ ಉಸ್ತಾದ್, ಸ್ವಾದೀಕ್ ಉಸ್ತಾದ್ ರವರನ್ನು ಮಸೀದಿಯ ಅಧ್ಯಕ್ಷರಾದ ಜನಾಬ್ ಸಲೀಂ ಕೊಲ್ಲಹಳ್ಳಿ ರವರು ಸನ್ಮಾನಿಸಿದರು
ವರದಿ: ಅಬ್ದುಲ್ ‌ಖಾದರ್ ಪಾಟ್ರಕೋಡಿ

About The Author

Leave a Reply