ರಾಜ್ಯದಲ್ಲಿ ಇಂದಿನಿಂದ ಹಾಲು, ಮೊಸರು, ವಿದ್ಯುತ್ ದರ ದುಬಾರಿ..!

ಬೆಂಗಳೂರು : ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಪ್ರತಿ ಲೀಟರ್ ನಂದಿನಿ ಹಾಲಿನ ದರ 4 ರೂ.ಏರಿಕೆ ಮಾಡಿ ಸಂಪುಟ ಅನುಮೋದನೆ ನೀಡಿತ್ತು. ಅಲ್ಲದೇ ಮೊಸರು, ವಿದ್ಯುತ್ ದರ ಏರಿಕೆ ಮಾಡಲಾಗಿದ್ದು, ಇಂದಿನಿಂದ ಇವೆಲ್ಲದರ ಮೇಲಿನ ಪರಿಕೃತ ದರ ಜಾರಿಯಾಗಲಿದೆ.

ಹೌದು ಈಗಾಗಲೇ ರಾಜ್ಯದಲ್ಲಿ ಬಸ್ಸು, ಮೆಟ್ರೋ ಪ್ರಯಾಣ ದರ ಹೆಚ್ಚಳ ಬೆನ್ನಲ್ಲೇ ರಾಜ್ಯದ ಜನತೆಗೆ ಇಂದಿನಿಂದ ಹಾಲಿನ ದರ, ವಿದ್ಯುತ್ ಶುಲ್ಕ, ವಿದ್ಯುತ್ ಸಂಪರ್ಕದ ನಿಗದಿತ ಶುಲ್ಕ, ಇವಿ ಕಾರುಗಳ ಮೇಲಿನ ತೆರಿಗೆ ಹೆಚ್ಚಳದ ಶಾಕ್ ತಟ್ಟಲಿದೆ. ಬಳಕೆದಾರರ ಸೆಸ್ ಹೆಸರಿನಲ್ಲಿ ಹೊಸ ಹೊರೆ ಹೆಗಲೇರಲಿದ್ದು, ಜನಸಾಮಾನ್ಯರ ದುನಿಯಾ ಮತ್ತಷ್ಟು ದುಬಾರಿ ಆಗಲಿದೆ.

ಜತೆಗೆ, ಕೇಂದ್ರ ಸರ್ಕಾರ ರಾಜ್ಯದಲ್ಲಿನ 66 ಟೋಲ್ ರಸ್ತೆಗಳಿಗೂ ಅನ್ವಯಿಸುವಂತೆ ಟೋಲ್ ದರವನ್ನು ಶೇ.2ರಿಂದ 5ರಷ್ಟು ಹೆಚ್ಚಳ ಮಾಡಿದೆ. ಹೀಗಾಗಿ, ರಾಜ್ಯದ ಬಡವರು ಮಾಧ್ಯಮವರ್ಗದವರಿಗೆ ಯುಗಾದಿ ಹಬ್ಬಕ್ಕೆ ಸಿಹಿಗಿಂತ ಕಹಿನೆ ರಾಜ್ಯ ಸರ್ಕಾರ ನೀಡಿದೆ. ಬೆಲೆ ಏರಿಕೆ ಸಂಬಂಧ ಈಗಾಗಲೇ ರಾಜ್ಯದ ಜನತೆ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಲೀಟರ್ ಹಾಲಿಗೆ 4 ರೂ.ಹೆಚ್ಚಳ: ‘KMF’

ನಂದಿನಿಯ ಎಲ್ಲ ಮಾದರಿಯ ಹಾಲು ಮತ್ತು ಮೊಸರಿನ ದರ ಹೆಚ್ಚಳವಾಗುತ್ತಿದ್ದು, ಸೋಮವಾರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಿದೆ. ಟೋನ್ಸ್ ಹಾಲಿನ (ನೀಲಿ ಪೊಟ್ಟಣ) ದರ 642ರಿಂದ 46, ಹೋಮೋ ಜಿನ್ಸೆಸ್ಟ್ ಟೋನ್ಸ್ 4300ce47, ಹಾಲು (ಹಸಿರು ಪೊಟ್ಟಣ) 546 ರಿಂದ 30, ಶುಭಂ (ಕೇಸರಿ ಪೊಟ್ಟಣ) ಸ್ಪೆಷಲ್ ಹಾಲು 248ರಿಂದ 652 ಮತ್ತು ಮೊಸರು 50ರಿಂದ 34ಕ್ಕೆ ಹೆಚ್ಚಳವಾಗಲಿದೆ.

ಮೊಸರು 200 ಗ್ರಾಂಗೆ 12ರಿಂದ 13, 500 ಗ್ರಾಂಗೆ 26ರಿಂದ 28. 1 ಲೀಟರ್‌ಗೆ 50ರಿಂದ ೮54ಕ್ಕೆ ಏರಿಕೆಯಾಗಿದೆ. ಮಸಾಲ ಮಜ್ಜಿಗೆ 200 ಮಿ.ಲೀಗೆ 9ರಿಂದ 10ಕ್ಕೆ, ಸಿಹಿ ಲಸ್ಸಿ 200 ಮಿ.ಲೀ ಗೆ 13ರಿಂದ 14, ಸುವಾಸಿತ ಹಾಲು 200 ಮಿ.ಲೀಗೆ 13ರಿಂದ 14 ಹಾಗೂ ಮ್ಯಾಂಗೋ ಲಸ್ಸಿ 180 ಮಿ.ಲೀಗೆ 15ರಿಂದ 16ಕ್ಕೆ ಹೆಚ್ಚಳವಾಗಲಿದೆ.

ವಿದ್ಯುತ್ ಶುಲ್ಕ, ನಿಗದಿತ ಶುಲ್ಕ ಶಾಕ್:

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋ ಗವು (ಕೆಂಆರ್ ಸಿ) ವಿ.1ರಿಂದ ಗೃಹ ಬಳಕೆದಾ ರರಿಗೆ ವಿದ್ಯುತ್ ದರ ಪ್ರತಿ ಯುನಿಟ್‌ 26 ಪೈಸೆ ಹಾಗೂ ನಿಗದಿತ ಶುಲ್ಕ ಪ್ರತಿ ಕೆ.ವ್ಯಾಟ್‌ಗೆ ಬರೋಬ್ಬರಿ 15 ಹೆಚ್ಚಳ ಮಾಡಿದೆ. ಮತ್ತೊಂ ಬೆಡೆ ಕೈಗಾರಿಕೆ ಹಾಗೂ ವಾಣಿಜ್ಯ ಸಂಪರ್ಕಗಳಿಗೆ ಪ್ರತಿ ಯೂನಿಟ್‌ಗೆ 64 ಪೈಸೆಯಿಂದ 1.25ರ ವರೆಗೆ ವಿದ್ಯುತ್ ದರದಲ್ಲಿ ಭಾರಿ ಕಡಿತ ಮಾ ಡಿದೆ. ವಾಣಿಜ್ಯ ಸಂಪರ್ಕಗಳಿಗೆ ನಿಗದಿತ ಶುಲ್ಕವೂ ಸಹ ಈ ಹಾಗೂ 210 ಮಾತ್ರ ಹೆಚ್ಚಳ ಮಾಡಲಾಗಿದೆ. ಮಾರ್ಚ್ 18 ರಂದು ಕೆಇಆರ್ಸಿಯು ಎಲ್ಲ ಎಸ್ಕಾಂಗಳ ನೌಕರರ ಪಿಂಚಣಿ, ಗ್ರಾಚ್ಯುಟಿ ಹೊರೆಯನ್ನು ಗ್ರಾಹಕರ ಮೇಲೆ ಹಾಕಿ ಏ.1ರಿಂದ ಪ್ರತಿ ಯುನಿಟ್‌ಗೆ 30 ಪೈಸೆ ದರ ಮಚ್ಚಳ ಮಾಡಿತ್ತು.

ಹೀಗಾಗಿ, ವಾರ್ಷಿಕ ದರ ಪರಿಷ್ಕರಣೆಯಲ್ಲಿ ಕೆಇಆರ್‌ಸಿಯು ಗೃಹ ಬಳಕೆ ದರ 10 ಪೈಸೆ ಕಡಿಮೆ ಮಾಡಿದ್ದರೂ ಏ.1ರಿಂದ ಅನ್ವಯವಾಗುವಂತೆ 26 ಪೈಸೆ ಹೊರೆ ಬೀಳಲಿದೆ. ಇನ್ನು, ಇಂಧನ ಇಲಾಖೆಯಿಂದ ಲಿಫ್ಟ್, ಟ್ರಾನ್ಸ್‌ಫಾರ್ಮರ್, ಜನರೇಟರ್ ಪರಿಶೀಲನೆ ಮತ್ತು ನವೀಕರಣ ಶುಲ್ಕವನ್ನೂ ಎರಡರಿಂದ ಮೂರು ಪಟ್ಟು ಹೆಚ್ಚಳ ಮಾಡಲಾಗಿದೆ.

Leave a Reply