October 12, 2025
WhatsApp Image 2025-01-12 at 1.18.40 PM

ಮಂಗಳೂರು: ನಗರದ ಬಿಕರ್ನಕಟ್ಟೆಯಲ್ಲಿ ಸೋಮವಾರ ಸಂಜೆ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಮೃತದೇಹವು ಕೊಳೆತು ಅಹಿತಕರ ವಾಸನೆ ಹೊರಸೂಸುತ್ತಿತ್ತು. ಮೃತದೇಹ ಪತ್ತೆಯಾದ ಸ್ಥಳ ರಮೇಶ್‌ ಎಂಬುವರಿಗೆ ಸೇರಿದ್ದು. ಅವರು ದೂರು ದಾಖಲಿಸಿದ್ದಾರೆ.

ಇದರ ಆಧಾರದ ಮೇಲೆ ಪೂರ್ವ ಪೊಲೀಸ್‌ ಠಾಣೆಯಲ್ಲಿ ಯುಡಿಆರ್‌ ನಂ.6/25 ರಲ್ಲಿ ಯು.ಡಿ.ಆರ್‌ (ಅಸ್ವಾಭಾವಿಕ ಮರಣ ಪ್ರಕರಣ). ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ತಪಾಸಣೆ ವೇಳೆ ಮೃತದೇಹದ ಬಳಿಯಿದ್ದ ಬ್ಯಾಗನಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಒಪಿಡಿ ಚೀಟಿ ಪತ್ತೆಯಾಗಿದೆ. ಚೀಟಿಯಲ್ಲಿನ ಮಾಹಿತಿಯಂತೆ ಮೃತರನ್ನು ಫೆ.4ರಂದು. 108 ಆಂಬುಲೆನ್ಸ್‌ ಮೂಲಕ ವೆನ್ಸಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕುಡಿದ ಅಮಲಿನಲ್ಲಿ ಕೆಳಗೆ ಬಿದ್ದು ಗಾಯಗೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರಗೆ. ದಾಖಲಿಸಲಾಗಿದೆ ಎಂದು ಆಸ್ಪತ್ರೆ ದಾಖಲೆಗಳು ಸೂಚಿಸುತ್ತದೆ. ಮೃತರ ಗುರುತು ಪತ್ತೆಗೆ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

About The Author

Leave a Reply