October 12, 2025
WhatsApp Image 2025-04-02 at 12.27.31 PM

 ಚಿಕ್ಕಮಗಳೂರು ಜಿಲ್ಲೆಯಲ್ಲಿ ಘೋರವಾದ ದುರಂತ ಸಂಭವಿಸಿದ್ದು, ನಾಡ ಬಂದೂಕಿನಿಂದ ಗುಂಡು ಹಾರಿಸಿ ವ್ಯಕ್ತಿಯೊಬ್ಬ ಅತ್ತೆ, ನಾದಿನಿ ಹಾಗು ಮಗಳನ್ನು ಭೀಕರವಾಗಿ ಹತ್ಯೆ ಮಾಡಿ, ಬಳಿಕ ತಾನು ಸಹ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರಿನ ಮಾಗಲು ಗ್ರಾಮದಲ್ಲಿ ಈ ಒಂದು ಘೋರವಾದ ಘಟನೆ ನಡೆದಿದೆ.

ಅತ್ತೆ ಜ್ಯೋತಿ (50) ನಾದಿನಿ ಸಿಂಧು (26) ಹಾಗು ಮಗಳು ಮೌಲ್ಯ (7) ಎನ್ನುವವರನ್ನು ರತ್ನಾಕರ್ ಎನ್ನುವ ವ್ಯಕ್ತಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಮೂವರನ್ನು ಹತ್ಯೆ ಮಾಡಿದ ಬಳಿಕ ರತ್ನಾಕರ್ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ. ರತ್ನಾಕರ ಮನೆಯ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿಗಷ್ಟೇ ಕೊಡಗು ಜಿಲ್ಲೆಯಲ್ಲಿ ಹೆಂಡತಿಗೆ ಅಕ್ರಮ ಸಂಬಂಧ ಇದೆ ಎಂದು ಶಂಕಿಸಿ ನಾಲ್ವರನ್ನು ಕೊಚ್ಚಿ ಕೊಂದು ಪತಿಯೊಬ್ಬ ಪರಾರಿಯಾಗಿದ್ದ ಘಟನೆ ನಡೆದಿತ್ತು. ಬಳಿಕ ಪೊಲೀಸರು ಶೀಘ್ರ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಚಿಕ್ಕಮಗಳೂರಲ್ಲು ಸಹ ಅಲಿಯನೊಬ್ಬ ಅತ್ತೆ ನಾದಿನಿ ಹಾಗು ಮಗಳನ್ನು ಭೀಕರವಾಗಿ ಕೊಂದು ತಾನು ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

About The Author

Leave a Reply