
ಮುಲ್ಕಿ: ಮುಲ್ಕಿಯ ಕೊಳ್ನಾಡಿನಲ್ಲಿ ಎಪ್ರಿಲ್ ಒಂಭತ್ತರದಂದು ನಾಪತ್ತೆಯಾಗಿದ್ದ ರಿಕ್ಷಾ ಚಾಲಕರೋರ್ವರ ಮೃತದೇಹವು ಕುಂಜತ್ತೂರು ಪದವು ನಿರ್ಜನ ಪ್ರದೇಶದ ಬಾವಿಯಲ್ಲಿ ಪತ್ತೆಯಾಗಿದೆ.



ರಿಕ್ಷಾ ಚಾಲಕ ಮಹಮ್ಮದ್ ಶರೀಫ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಇವರನ್ನು ಮಾದಕ ವ್ಯಸನಿಗಳು ಹತ್ಯೆ ಮಾಡಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ. ಇವರು ರಿಕ್ಷಾವನ್ನು ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಪಾರ್ಕಿಂಗ್ ಮಾಡುತ್ತಿದ್ದರು. ಅದರೆ ಇವರು ಮನೆಗೆ ಬಾರದೆ ಇದ್ದ ಕಾರಣ ಮನೆಯವರು ಕಾಲ್ ಮಾಡಿದ್ದು ಸಂಪರ್ಕಕ್ಕೆ ಸಿಗಲಿಲ್ಲ. ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಿನ್ನೆ ರಾತ್ರಿಯ ವೇಳೆಗೆ ಇವರ ಮೃತದೇಹ ಕರ್ನಾಟಕ-ಕೇರಳ ಗಡಿಭಾಗದ ಕುಂಜತ್ತೂರು ಪದವು ಎಂಬಲ್ಲಿನ ಬಾವಿಯಲ್ಲಿ ಪತ್ತೆಯಾಗಿದೆ. ಬಾವಿಯ ಬಳಿ ರಕ್ತದ ಕಲೆಗಳು ಕೂಡಾ ಕಂಡುಬಂದಿದೆ. ಮಂಗಳೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.