ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿನಿಯರಿಗೆ ಎಸ್.ಡಿ.ಪಿ.ಐ ಸಂಟ್ಯಾರ್ ಬ್ರಾಂಚ್ ವತಿಯಿಂದ ಸ್ಮರಣಿಕೆ ನೀಡಿ ಅಭಿನಂದನೆ

ಪುತ್ತೂರು : 2024-25 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ ಪಡೆದ ಹಮೀದ್ ಕಲ್ಲರ್ಪೆ ಅವರ ಪುತ್ರಿ ಫಾತಿಮತ್ ನಾಫಿಯಾ ಹಾಗೂ ಹಮೀದ್ ಮರಿಕೆ ಅವರ ಪುತ್ರಿ ನೆಬಿಸತುಲ್ ಮಿಸ್ರಿಯಾ ಇವರಿಗೆ ಎಸ್‍ಡಿಪಿಐ ಸಂಟ್ಯಾರ್ ಬ್ರಾಂಚ್ ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ SDPI ಕುಂಬ್ರ ಬ್ಲಾಕ್ ಅಧ್ಯಕ್ಷರಾದ ರಿಯಾಝ್ ಬಳಕ್ಕ, SDPI ಆರ್ಯಾಪು ಗ್ರಾಮ ಸಮಿತಿ ಉಪಾಧ್ಯಕ್ಷರಾದ ರಫೀಕ್ ಎಚ್.ಇ , SDPI ಸಂಟ್ಯಾರ್ ಬ್ರಾಂಚ್ ಅಧ್ಯಕ್ಷರಾದ ಝಕರಿಯಾ ಸಂಟ್ಯಾರ್, ಕೋಶಾಧಿಕಾರಿ ಶರೀಫ್ ನೀರ್ಕಜೆ ಹಾಗೂ ಸದಸ್ಯರಾದ ಸಮದ್ ಝೆನಿತ್ ಮತ್ತು ಹಾಶಿಂ ಉಪಸ್ಥಿತರಿದ್ದರು.

Leave a Reply