October 13, 2025
WhatsApp Image 2025-04-14 at 5.13.39 PM

 ಮುಸ್ಲೀಮರ ಮದುವೆ ಕಾಂಟ್ರ್ಯಾಕ್ಟ್ ಮದುವೆ. ಹಿಂದೂಗಳಂತೆ ಏಳೇಳು ಜನ್ಮದ ಅನುಬಂಧ ಅಲ್ಲ ಅವರದ್ದು ಎಂಬುದಾಗಿ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಮುಸ್ಲೀಮರ ಮದುವೆ ಹಿಂದೂಗಳ ಮದುವೆಯಂತೆ ಅಲ್ಲ. ಅವರದ್ದು ಕಂಟ್ರ್ಯಾಕ್ಟ್ ಮ್ಯಾರಿಯೇಜ್ ಆಗಿದೆ. ಹಿಂದೂಗಳದ್ದು ಏಳೇಳು ಜನ್ಮದ ಮದುವೆಯಾಗಿದೆ ಎಂಬುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಕ್ಫ್ ತಿದ್ದುಪಡಿ ವಿಧೇಯಕ ಸರಿಯಾಗಿ ಆಗಿಲ್ಲ ಅನಿಸುತ್ತಿದೆ. ಮುಸ್ಲೀಮರ ಹಕ್ಕುಗಳನ್ನು ಧ್ವಂಸ ಮಾಡಲು ಹೊರಟಂತಿದೆ. ವಕ್ಫ್ ಬಿಲ್ ವಿರುದ್ಧ ದೇಶದಲ್ಲಿ ಅಶಾಂತಿ ಉಂಟಾಗಬಹುದು ಎಂಬುದಾಗಿ ತಿಳಿಸಿದ್ದಾರೆ.

ಸಿಎಂ ಆಗಿ ಸಿದ್ಧರಾಮಯ್ಯನವರು 5 ವರ್ಷ ಪೂರ್ಣಗೊಳಿಸುತ್ತಾರೆ. ಮುಂದಿನ ಮೂರು ವರ್ಷಗಳ ಕಾಲ ಸಿದ್ಧರಾಮಯ್ಯನವರೇ ಇರ್ತಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಯಾಕೆ ಸಿಎಂ ಆಗಬಾರದು.? ಆದರೇ ನನ್ನ ಪ್ರಕಾರ ಇನ್ನೂ ಮೂರು ವರ್ಷ ಸಿದ್ಧರಾಮಯ್ಯನವರೇ ಇರ್ತಾರೆ. ಸಿದ್ಧರಾಮಯ್ಯನವರಿಗೆ ಬದ್ಧತೆ ಇದೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಮುಂದುವರೆಯುತ್ತಾರೆ. ಸದ್ಯ ಯಾವುದೇ ಬದಲಾವಣೆ ಇಲ್ಲ ಎಂಬುದಾಗಿ ತಿಳಿಸಿದರು.

About The Author

Leave a Reply