ತಾಲಿಬಾನ್ ಮಾದರಿ, ಮಹಿಳೆ ಮೇಲೆ ಹಲ್ಲೆ ಕೇಸ್ : 6 ಆರೋಪಿಗಳು ಅರೆಸ್ಟ್!

ದಾವಣಗೆರೆ : ಇತ್ತೀಚಿಗೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಾವರಕೆರೆ ಗ್ರಾಮದ ಜಾಮೀಯಾ ಮಸೀದಿ ಬಳಿ ಅನೈತಿಕ ಸಂಬಂಧ ಆರೋಪದ ಮೇಲೆ ಇಬ್ಬರು ಮಹಿಳೆಯರಿಗೆ ತಾಲಿಬಾನ್ ರೀತಿಯಲ್ಲಿ ಹೊಡೆದಿರುವ ವಿಚಾರ ಕುರಿತಂತೆ ಪ್ರಕರಣ ಸಂಬಂಧ 6 ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಏಪ್ರಿಲ್ 9ರಂದು ತಾವರೆಕೆರೆ ಗ್ರಾಮದ ಜಾಮಿಯಾ ಮಸೀದಿ ಬಳಿ ಈ ಒಂದು ಅಮಾನವೀಯ ಘಟನೆ ನಡೆದಿತ್ತು. ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಏಪ್ರಿಲ್ 13 ರಂದು ಸಾಮಾಜಿಕ ಜಾಲತಾಣದಲ್ಲಿ ಹಲ್ಲೆ ಮಾಡುವ ವಿಡಿಯೋ ವೈರಲಾಗಿದೆ. ತಾಲಿಬಾನ್ ಮಾದರಿಯಲ್ಲಿ ನಸ್ರಿನ್ ಬಾನು ಮೇಲೆ ಹಲ್ಲೆ ಗೈದಿದ್ದರು. ಪ್ರಕರಣ ಸಂಬಂಧ ಮತ್ತಷ್ಟು ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ಕುರಿತು ಏಪ್ರಿಲ್ 19 ರಂದು ಸಂತ್ರಸ್ತ ಮಹಿಳೆ ಕೋರ್ಟ್ ಅಲ್ಲಿ ಹೇಳಿಕೆ ನೀಡಲಿದ್ದಾರೆ. ಚೆನ್ನಗಿರಿ ನ್ಯಾಯಾಲಯದಲ್ಲಿ ಮಹಿಳೆ ತನ್ನ ಹೇಳಿಕೆ ದಾಖಲಿಸಲಿದ್ದು, ಕಲ್ಲು, ಕಬ್ಬಿಣ, ದೊಣ್ಣೆಯಿಂದ ಹತ್ತಾರು ಜನರು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಮೊಹಮ್ಮದ್ ನಯಾಜ್, ಮಹಮ್ಮದ್ ಗೌಸ್ ಪೀರ್, ಚಾಂದ್ ಪೀರ್, ಇನಾಯತ್ ಉಲ್ಲಾ, ದಸ್ತಗಿರ್ ಟಿ ಆರ್ ರಸೂಲ್ ಎಂಬಾತರಿಂದ ನಸ್ರಿನ್ ಬಾನು ಕೊಲೆಗೆ ಯತ್ನಿಸಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Leave a Reply