ಮಂಗಳೂರು : ಗಾಂಜಾ ಸೇವನೆ ನಾಲ್ವರು ಅರೆಸ್ಟ್..!

ಮಂಗಳೂರು : ಕಾವೂರು ಮತ್ತು ಬಂದರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಮಾಡಿದ ಪ್ರಕರಣದ ಸಂಬಂಧ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೋಂದೆಲ್ ಜಂಕ್ಷನ್ ಬಳಿ ಮಾದಕ ವಸ್ತು ಸೇವನೆ ಮಾಡಿದಂತೆ ಕಂಡು ಬಂದ ಮಂಜೇಶ್ವರ ಉದ್ಯಾವರ ನಿವಾಸಿ ಅಬ್ದುಲ್ ಆಜೀಜ್ (39), ಕುಂಜತ್ತೂರು ನಿವಾಸಿ ಅಪ್ಸರ್ (36) ಪಂಜಿಮೊಗರು ಜಂಕ್ಷನ್ ಬಳಿ ಪುತ್ತೂರು ನಿವಾಸಿ ಮುಹಮ್ಮದ್ ಫೈಜಲ್ (27) ಸೆಂಟ್ರಲ್ ಮಾರ್ಕೆಟ್ ಬಳಿ ಬಿಹಾರ ಮೂಲದ ಫಳ್ನೀರ್ ನಲ್ಲಿ ವಾಸವಿದ್ದ ಇಮ್ರಾನ್ ಆಲಮ್ (18) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ನಾಲ್ವರನ್ನು ವೈದ್ಯಕೀಯ ತಪಾಸನೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Reply