February 19, 2026
WhatsApp Image 2025-04-23 at 10.29.57 AM

ಮಣಿಪಾಲ: ಎಪ್ರಿಲ್ 4 ರಂದು 12:00 ಗಂಟೆಯ ಸಮಯಕ್ಕೆ ಮಹೇಶ್ ಪ್ರಸಾದ್‌, ಪೊಲೀಸ್‌ ನಿರೀಕ್ಷಕರು ಮಣಿಪಾಲ ಪೊಲೀಸ್‌ ಠಾಣೆ ಇವರು ಠಾಣೆಯಲ್ಲಿದ್ದಾಗ ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ಧಶರಥ ನಗರದ ಡೌನ್‌ ಟೌನ್‌ ಲಾಡ್ಜ್‌ನ ರೂಮ್‌ ನಂ 106 ರಲ್ಲಿ ಕೆಲವು ವ್ಯಕ್ತಿಗಳು ಮಾದಕವಸ್ತುವನ್ನು ತೆಗೆದುಕೊಳ್ಳಲು ಉಪಯೋಗಿಸುವ ಸಿರಿಂಜ್‌ಗಳನ್ನು ಹೊಂದಿದ ಬಗ್ಗೆ ಮಾಹಿತಿ ಬಂದಿದೆ.

ನಂತೆ ಸಿಬ್ಬಂದಿಯವರ ಹಾಗೂ ಪಂಚರುಗಳ ಸಮಕ್ಷಮ ಡೌನ್‌ ಟೌನ್‌ ಲಾಡ್ಜ್‌ನ ರೂಮ್‌ ನಂ 106 ಕ್ಕೆ ದಾಳಿ ಮಾಡಿ ಆರೋಪಿಗಳಾದ 1. ಮಹಮ್ಮದ್‌ ಅಜರುದ್ದೀನ್‌ 2. ರಾಜೇಶ್‌ ಪ್ರಕಾಶ್‌ ಜಾದವ್‌, 3. ನಾಜೀಲ್‌ ಮಲ್ಪೆ ಇವರನ್ನು ಹಾಗೂ ಅವರ ವಶದಲ್ಲಿದ್ದ 40,000/- ರೂಪಾಯಿ ಮೌಲ್ಯದ ಒಟ್ಟು 13.70 ಗ್ರಾಂ ತೂಕದ MDMA ಮತ್ತು 10,500/- ರೂಪಾಯಿ ಮೌಲ್ಯದ 225 ಗ್ರಾಂ ಗಾಂಜಾ , ಪ್ಲಾಸ್ಟಿಕ್‌ ಸಣ್ಣ ಸಣ್ಣ ಕವರ್‌ 15 , 5 ಸಿರಿಂಜ್‌ಗಳು , Sterile water 5 ml ನ 3 ಪ್ಲಾಸ್ಟಿಕ್‌ ಸೀಸೆ ಹಾಗೂ 500 ಮೌಲ್ಯದ ACE ಕಂಪೆನಿಯ ಕೀಪ್ಯಾಡ್‌ ಮೊಬೈಲ್‌ ಮತ್ತು 5000 ರೂಪಾಯಿ ಮೌಲ್ಯದ REDMI ಕಂಪೆನಿಯ ಟಚ್‌ ಸ್ಕ್ರೀನ್‌ ಮೊಬೈಲ್‌ ನ್ನು ವಶಪಡಿಸಿಕೊಂಡಿರುದಾಗಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 70/2025 ಕಲಂ: 8(c), 20(b),22(b) NDPS ACT ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

About The Author

Leave a Reply