August 30, 2025
WhatsApp Image 2025-05-07 at 4.20.50 PM

ಬೆಂಗಳೂರು : ಭಾರತೀಯ ಸೇನೆಯ ಕಾರ್ಯ ಶ್ಲಾಘನೀಯ. ಉಗ್ರರಿಗೆ ಆಶ್ರಯ ನೀಡುವ ಪಾಕಿಸ್ತಾನಕ್ಕೆ ತಕ್ಕ ಪಾಠ. ನಮ್ಮ ತಂಟೆಗೆ ಬಂದರೆ ಉಗ್ರರಿಗೆ ಹಾಗೂ ಪಾಕಿಸ್ತಾನಕ್ಕೆ ಉಳಿಗಾಲ ಇಲ್ಲ ಎಂಬ ಸಂದೇಶ ರವಾನೆಯಾಗಿದೆ. ನಮ್ಮ ಸೇನೆ ನಮ್ಮ ಹೆಮ್ಮೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಹಲ್ಗಾಮ್ ದಾಳಿಯಲ್ಲಿ ಅಮಾಯಕರನ್ನು ಕೊಂದ ಪಾಕಿಸ್ತಾನದ ಉಗ್ರರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ನಡೆಸಿ ತನ್ನ ಶಕ್ತಿ ಹಾಗೂ ಪರಾಕ್ರಮ ತೋರಿಸಿದೆ.ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಹಾಗೂ ಭಯೋತ್ಪಾದಕ ಕೃತ್ಯ ಎಸಗುವ ಉಗ್ರಗಾಮಿ ಸಂಘಟನೆಗಳ ಹುಟ್ಟಡಗಿಸುವ ಹೋರಾಟದಲ್ಲಿ ನಾವೆಲ್ಲರೂ ಕೇಂದ್ರ ಸರ್ಕಾರದ ಜೊತೆಗಿದ್ದೇವೆ

ದೇಶದ ಜನರು ಒಗ್ಗಟ್ಟಿನ ಬಲವನ್ನು ಸೈನ್ಯಕ್ಕೆ ನೀಡಿದ್ದೇವೆ. ಸಮರ್ಥ ಬಲ ಮೂಡುವ ಹಾಗೆ ಸೂಕ್ತ ಕಾರ್ಯಾಚರಣೆ ಆಗಿದೆ. ಇದು ಯುದ್ಧ ಕಾಲ ಎಲ್ಲರೂ ಸನ್ನದ್ಧರಾಗಿ ಇರಬೇಕು. ಗಡಿಯಿಂದ ಎಷ್ಟು ದೂರ ಇದ್ದೇವೆ ಅನ್ನು ಪ್ರಶ್ನೆ ಅಲ್ಲ. ಎಲ್ಲ ರೀತಿಯ ಜಾಗೃಕತೆ ಇರಬೇಕು. ಆ ಹಿನ್ನೆಲೆಯಲ್ಲಿ ಎಲ್ಲರೂ ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

About The Author

Leave a Reply