November 8, 2025
thane-fire

ಮಂಗಳೂರು: ದಕ್ಷಿಣ ಕನ್ನಡದಲ್ಲಿ ತಮ್ಮನೇ ಅಣ್ಣನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ಕೋಡಿಂಬಾಳದ ಕೋರಿಯಾರ್ ಸಮೀಪ ನಡೆದಿದೆ.

ಗಂಭೀರವಾಗಿ ಗಾಯಗೊಂಡಿರುವ ಗಾಯಾಳು ಹನುಮಪ್ಪ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗದಗ ಮೂಲದ ಅಣ್ಣ-ತಮ್ಮಂದಿರು ಪುತ್ತೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ.

ಭಾನುವಾರ ಮಧ್ಯಾಹ್ನ ಪ್ಯಾಸೆಂಜರ್ ರೈಲಿನಲ್ಲಿ ಆಗಮಿಸಿದ ಇವರು ಬಜಕರೆ ರೈಲು ನಿಲ್ದಾಣದಲ್ಲಿ ಇಳಿದಿದ್ದಾರೆ. ರೈಲು ಹೋದ ನಂತರ ಸುಮಾರು 500 ಮೀಟರ್ ದೂರದವರೆಗೂ ಅಣ್ಣನನ್ನು ಕರೆದುಕೊಂಡು ಹೋದ ತಮ್ಮ ನಿಂಗಪ್ಪ ಏಕಾಏಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಹನಮುಪ್ಪ ಚರಂಡಿಗೆ ಹಾರಿದ್ದು, ಚರಂಡಿ ನೀರಿಗೆ ಬಿದ್ದ ಕಾರಣ ಬೆಂಕಿ ನಂದಿದೆ. ಅವರ ಕಿರುಚಾಟ ಕೇಳಿದ ಸ್ಥಳೀಯರು ಓಡಿ ಬಂದು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಡಬ ಠಾಣೆ ಪೊಲೀಸರು ನಿಂಗಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದ ತನಿಖೆ ಕೈಗೊಳ್ಳಲಾಗಿದೆ.

About The Author

Leave a Reply