August 30, 2025
WhatsApp Image 2025-06-09 at 9.48.20 PM

ಮಂಗಳೂರು : ಕೇರಳ ಕೋಯಿಕ್ಕೋಡ್ ಸಮುದ್ರ ತೀರದಲ್ಲಿ ಬೆಂಕಿಗಾಹುತಿಯಾಗಿರುವ ಸಿಂಗಾಪುರದ ಹಡಗಿನಲ್ಲಿ ಗಾಯಗೊಂಡವರಿಗೆ ಮಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೇರಳದ ಕೋಯಿಕ್ಕೋಡ್ ಬೇಪೂರ್ ಭಾಗದ ಸಮುದ್ರದಲ್ಲಿ ಸಿಂಗಾಪುರ ಮೂಲದ ಸರಕು ಸಾಗಾಣಿಕೆ ಹಡಗು ಎಂವಿ ವ್ಯಾನ್ ಹೈ 503 ಬೆಂಕಿಗಾಹುತಿಯಾಗಿದೆ. ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಹಡಗಿನಲ್ಲಿದ್ದ ಸಿಬ್ಬಂದಿಗಳ ರಕ್ಷಣೆ ಮಾಡಿದ್ದಾರೆ. ಗಾಯಗೊಂಡ ಮತ್ತು ಸುರಕ್ಷಿತರಾಗಿ ಹೊರಬಂದ ಸಿಬ್ಬಂದಿಯನ್ನು ಕರೆದುಕೊಂಡು ಬಂದ ಐಎನ್‌ಎಸ್ ಸೂರತ್ ಹಡಗು ಸೋಮವಾರ ರಾತ್ರಿ ಮಂಗಳೂರು ತಲುಪಿದೆ. ಚೀನಾದ ಎಂಟು ಮಂದಿ, ತಾಯ್ತಾನ್ ಮತ್ತು ಮ್ಯಾನ್ಮಾರ್‌ನ ತಲಾ ನಾಲ್ವರು, ಇಂಡೊನೇಷ್ಯಾದ ಇಬ್ಬರನ್ನು ನೌಕಾಪಡೆಯ ಹಡಗಿನಲ್ಲಿ ನವಮಂಗಳೂರು ಬಂದರು ನಿಗಮಕ್ಕೆ ಕರೆದುಕೊಂಡು ಬರಲಾಯಿತು.

10.45ರ ವೇಳೆ ತಲುಪಿದ ಹಡಗಿನಲ್ಲಿದ್ದ 18 ಮಂದಿಯ ಪೈಕಿ ಗಂಭೀರ ಗಾಯಗೊಂಡ ಇಬ್ಬರು ಸೇರಿದಂತೆ ಆರು ಮಂದಿಯನ್ನು ಕರಾವಳಿ ಕಾವಲು ಪಡೆಯ ಸಿಬ್ಬಂದಿ ನೆರವಿನೊಂದಿಗೆ ಆಂಬುಲೆನ್ಸ್‌ ನಲ್ಲಿ ಕುಂಟಿಕಾನದ ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಗಂಭೀರ ಸ್ಥಿತಿಯಲ್ಲಿರುವ ಇಬ್ಬರನ್ನು ಸ್ಪಿಚರ್‌ನಲ್ಲಿ ಆಸ್ಪತ್ರೆಯ ಒಳಗೆ ಕರೆದುಕೊಂಡು ಹೋಗಲಾಯಿತು. ನಾಲ್ವರು ನಡೆದುಕೊಂಡೇ ಹೋದರು. ಗಾಯಗಳಿಲ್ಲದವರನ್ನು ಹೋಟೆಲ್‌ನಲ್ಲಿ ಇರಿಸಲಾಗಿದೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.

About The Author

Leave a Reply