ಚಪ್ಪಲಿ, ಸ್ಕೂಟಿ ಕೋಡಿ ಸೇತುವೆ ಮೇಲೆ ಪತ್ತೆ:ನದಿಯಲ್ಲಿ ಮಹಿಳೆಯ ಹುಡುಕಾಟ

ಕುಂದಾಪುರ: ಸ್ಕೂಟಿನಲ್ಲಿ ಡೆತ್ ನೋಟ್ ಬರೆದಿಟ್ಟು ಮಹಿಳೆಯೊಬ್ಬರು ನದಿಗೆ ಹಾರಿ ನಾಪತ್ತೆಯಾದ ಘಟನೆ ಕೋಡಿಯ ಸೇತುವೆಯ ಬಳಿ ನಡೆದಿದ್ದು, ಮಹಿಳೆ ಪತ್ತೆಗೆ ಹುಡುಕಾಟ ಪ್ರಾರಂಭಿಸಲಾಗಿದೆ.
ನಾಪತ್ತೆಯಾದ ಮಹಿಳೆಯನ್ನು ವಡೇರಹೋಬಳಿ ಗ್ರಾಮದ ವಿಠಲವಾಡಿ, ಜೆಎಲ್‌ಬಿ ರಸ್ತೆಯ ನಿವಾಸಿ ಹೀನಾ ಕೌಸರ್‌ (32) ಎಂದು ಗುರುತಿಸಲಾಗಿದೆ.

ಮಹಿಳೆಯ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಇಬ್ಬರು ಮಕ್ಕಳಿದ್ದಾರೆ. ಹೀನಾ ತಾಯಿಯೊಂದಿಗೆ ವಿಠಲವಾಡಿಯ ಮನೆಯಲ್ಲಿ ನೆಲೆಸಿದ್ದು, ಸೋಮವಾರ ಬೆಳಗ್ಗೆ 5 ಗಂಟೆಗೆ ಮನೆಯಿಂದ ಹೊರಟು ಬಂದವರು ಸ್ಕೂಟಿಯನ್ನು ಸೇತುವೆಯ ಮೇಲಿಟ್ಟು, ನದಿಗೆ ಹಾರಿರಬಹುದು ಎನ್ನಲಾಗಿದೆ. ಅವರ ಚಪ್ಪಲಿ ಸೇತುವೆಯಲ್ಲಿ ಪತ್ತೆಯಾಗಿದೆ. ಸ್ಕೂಟಿಯಲ್ಲಿ ಡೆತ್‌ನೋಟ್‌ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಕುಂದಾಪುರ ಪೊಲೀಸರ ನೇತೃತ್ವದಲ್ಲಿ ಅಗ್ನಿ ಶಾಮಕ ದಳದ ಸಿಬಂದಿಯಿಂದ ಹಗಲಿಡೀ ನದಿಯಲ್ಲಿ ದೋಣಿಯ ಮೂಲಕ ಹುಡುಕಾಟ ನಡೆಯಿತು. ಆದರೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ಹೀನಾ ಅವರ ತಾಯಿ ಸಾದಿಕಾ ಬಾನು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

Share Information

Leave a Reply