January 17, 2026
arrest-1738723588851-7698acae-2f25-4429-87a8-c7927b9c6bf1-900x506

ಮಂಗಳೂರು: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪಿಕಪ್‌ ವಾಹನ ಸಹಿತ ಚಾಲಕ ಮೊಹಮ್ಮದ್‌ ನಿಜಾಂ ಯಾನೇ ನಿಜ್ಜು ಎಂಬಾತನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬುಧವಾರ ಬೆಳಗ್ಗೆ ಕಣ್ಣೂರು ಕಡೆಯಿಂದ ಬಂದ ವಾಹನವನ್ನು ಪಡೀಲ್‌ ಜಂಕ್ಷನ್‌ ಬಳಿಯ ಪೊಲೀಸ್‌ ಚೆಕ್‌ಪೋಸ್ಟ್‌ನಲ್ಲಿದ್ದ ಪೊಲೀಸರು ತಡೆದು ನಿಲ್ಲಿಸಿದರು.

ಪಿಕಪ್‌ನಲ್ಲಿ ಮರಳು ಕಂಡು ಬಂದಿದ್ದು, ಪರವಾನಿಗೆ ಬಗ್ಗೆ ವಿಚಾರಿಸಿದಾಗ ಆತನಲ್ಲಿ ಯಾವುದೇ ಪರವಾನಿಗೆ ಇರಲಿಲ್ಲ. ವಿಚಾರಣೆ ವೇಳೆ ಅರ್ಕುಳ ಮೈದಾನದಿಂದ ತುಂಬಿಸಿಕೊಂಡು ತಂದಿರುವುದಾಗಿ ತಿಳಿಸಿದ್ದಾನೆ. 4 ಲಕ್ಷ ರೂ. ಮೌಲ್ಯದ ಪಿಕಪ್‌ ವಾಹನ ಮತ್ತು 2,500 ರೂ. ಮೌಲ್ಯದ ಮರಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

About The Author

Leave a Reply