
ಸುಳ್ಯ: ಹಾಲು ಸಾಗಿಸುತ್ತಿದ್ದ ಪಿಕಪ್ ವಾಹನಕ್ಕೆ ಇನ್ನೊಂದು ಪಿಕಪ್ ವಾಹನ ಢಿಕ್ಕಿಯಾಗಿ ಹಾಲಿನ ವಾಹನ ಪಲ್ಟಿಯಾದ ಪರಿಣಾಮ 600 ಲೀಟರ್ ಹಾಲು ರಸ್ತೆ ಪಾಲಾದ ಘಟನೆ ಬಾಳಿಲದಲ್ಲಿ ನಡೆದಿದೆ.
ಪಿಕಪ್ ವಾಹನವು 4 ಹಾಲಿನ ಸೊಸೈಟಿಗಳಲ್ಲಿ ಸಂಗ್ರಹವಾದ ಸುಮಾರು 600 ಲೀಟರ್ ಹಾಲು ತುಂಬಿದ್ದ 20 ಕ್ಯಾನ್‌ಗಳನ್ನು ತೆಗೆದುಕೊಂಡು ಬೆಳ್ಳಾರೆ ಕಡೆಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿದೆ. ಘಟನೆಯಿಂದಾಗಿ ಹಾಲಿನ ಕ್ಯಾನ್‌ಗಳು ಚೆಲ್ಲಾಪಿಲ್ಲಿಯಾಗಿದ್ದು, ಬಹುತೇಕ ಹಾಲು ರಸ್ತೆಯಲ್ಲಿ ಚೆಲ್ಲಿ ಹೋಗಿದೆ.
ಅಪಘಾತದಲ್ಲಿ ಚಾಲಕ ಸಯ್ಯದ್ ಅಬ್ದುಲ್ ಚೆನ್ನಾವರ ಅವರು ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.