October 13, 2025
WhatsApp Image 2025-06-18 at 5.37.13 PM

ಉಡುಪಿ : ನಗರದಲ್ಲಿ ಬಸ್ ಚಾಲಕನ ಹುಚ್ಚಾಟದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾಲಕನನ್ನು ಬಂಧಿಸಿ ಬಸ್ಸ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಚಾಲಕ ದೇವರಾಜ್ ಎಂದು ತಿಳಿದು ಬಂದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಪ್ರಕರಣದ ಸಾರಾಂಶ : ಸಾಮಾಜಿಕ ಜಾಲತಾಣಗಳಲ್ಲಿ ಬಸ್‌ ಚಾಲಕನ ಹುಚ್ಚಾಟ ಪ್ರಯಾಣಿಕರಿಗೆ ಸಂಕಟ ಎನ್ನುವ ಶಿರ್ಷಿಕೆಯಲ್ಲಿ ವೈರಲ್‌ ಆಗಿರುವ ವಿಡಿಯೋವನ್ನು ಪರಿಶೀಲಿಸಲಾಗಿ, ದಿನಾಂಕ 17/06/2025ರಂದು ಸಂಜೆ 4:30 ಗಂಟೆಗೆ ಕರಾವಳಿ-ಉಡುಪಿ ರಾಹೆ-169Aನೇ ಸಾರ್ವಜನಿಕ ರಸ್ತೆಯಲ್ಲಿ ಆರೋಪಿ ದೇವರಾಜ ಎಂಬಾತನು KA20D8236ನೇ ಶ್ರೀ ದುರ್ಗಾಂಬ ಖಾಸಗಿ ಬಸ್ಸ್‌ನ್ನು ಕರಾವಳಿ ಕಡೆಯಿಂದ ಉಡುಪಿ ಕಡೆಗೆ ಸಾರ್ವಜನಿಕರ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬನ್ನಂಜೆ ಜಯಲಕ್ಷ್ಮೀ ಸಿಲ್ಕ್ ಬಳಿ ನಿಯಂತ್ರಣ ತಪ್ಪಿ ಬಸ್ಸು ತಿರುಗಿ ನಿಂತಿದ್ದು, ಬಳಿಕ ಆರೋಪಿ ಬಸ್ಸಿನ ಚಾಲಕನು ಬಸ್ಸ್‌ನ್ನು ವಿರುದ್ದ ದಿಕ್ಕಿನಲ್ಲಿ ಚಲಾಯಿಸಿಕೊಂಡು ಉಡುಪಿ ಕಡೆಗೆ ಹೋಗಿರುವುದಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯವಾಗಿರುವುದಿಲ್ಲ.

ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 72/2025 ಕಲಂ: 281, BNS 184,188,218 r/w 177 IMV Act ರಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿತ ಚಾಲಕ ದೇವರಾಜ್‌ನನ್ನು ದಸ್ತಗಿರಿ ಮಾಡಲಾಗಿರುತ್ತದೆ ಮತ್ತು ಬಸ್ಸ್‌ನ್ನು ವಶಕ್ಕೆ ಪಡೆಯಲಾಗಿರುತ್ತದೆ.

About The Author

Leave a Reply