October 13, 2025
WhatsApp Image 2025-06-18 at 7.58.45 PM

ಮಂಗಳೂರು: ದೇರೆಬೈಲ್ ಕೊಂಚಾಡಿ ನಿವಾಸಿ ಹಾಗೂ ಎನ್‌ಎಸ್‌ಯುಐ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಓಂ ಶ್ರೀ ಪೂಜಾರಿ ಹಾಗೂ ಅವರ ಸ್ನೇಹಿತ ಅಮನ್ ರಾವ್ ಮಂಗಳವಾರ ತಡರಾತ್ರಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಕೇಳಿ ನಿಜಕ್ಕೂ ಆಘಾತವಾಗಿದೆ ಎಂದು ವಿಧಾನ ಪರಿಷತ್ ಶಾಸಕ ಕೆಪಿಸಿಸಿ ಕಾರ್ಯಾಧ್ಯಕ್ಷರು ಆಗಿರುವ ಮಂಜುನಾಥ ಭಂಡಾರಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಎನ್‌ಎಸ್‌ಯುಐ ಹಾಗೂ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಓಂ ಶ್ರೀ ಪೂಜಾರಿ ಅವರು ಪ್ರತಿಭಾವಂತ ಯುವನಾಯಕರಾಗಿದ್ದರು. ಅವರ ಮರಣದಿಂದ ಸಮಾಜದ ಒಬ್ಬ ಸಮರ್ಪಿತ ಯುವ ಸೇವಕರನ್ನು ನಾವು ಕಳೆದುಕೊಂಡಿದ್ದೇವೆ.
ಮೃತರ ಆತ್ಮಗಳಿಗೆ ಶಾಂತಿ ದೊರಕಲಿ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಈ ದುಃಖದ ಹೊರೆಯನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಎಂದು ಭಂಡಾರಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

About The Author

Leave a Reply