August 30, 2025
WhatsApp Image 2025-06-22 at 9.37.35 AM

ಪುತ್ತೂರು :- ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಟ್ಯಾರ್ ಬ್ರಾಂಚ್ ವತಿಯಿಂದ ಸಂಸ್ಥಾಪನಾ ದಿನದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಸಂಟ್ಯಾರ್ ಶಾಲಾ ಬಳಿ ನಡೆಯಿತು.

ಧ್ವಜಾರೋಹಣ ನಡೆಸಿ ಸಂಸ್ಥಾಪನ ದಿನದ ಸಂದೇಶ ನೀಡಿ ಮಾತನಾಡಿದ ಎಸ್‍ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಉಪಾದ್ಯಕ್ಷರಾದ ಹಮೀದ್ ಸಾಲ್ಮರ ರವರು ದೇಶದಲ್ಲಿ ಎಸ್ ಡಿ ಪಿ ಐ ಹಲವು ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಮುನ್ನುಗ್ಗುತ್ತಿದೆ, ಈ ದೇಶದ ಸಂವಿಧಾನದ ಉಳಿವಿಗೆ ಸದೃಢ ಭಾರತದ ನಿರ್ಮಾಣಕ್ಕೆ ಎಸ್ ಡಿ ಪಿ ಐ ಪಣತೊಟ್ಟು ಹೋರಾಟವನ್ನು ನಡೆಸುತ್ತಿದೆ. ಈ ದೇಶದ ಸಾರ್ವಭೌಮತೆ ಹಾಗು ಸಾಮರಸ್ಯವನ್ನು ಅಳಿಸುವ ಶಕ್ತಿಗಳನ್ನು ತಡಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂಬ ಸಂದೇಶವನ್ನು ನೀಡಿದರು.

ಕಾರ್ಯಕ್ರಮವನ್ನುದ್ದೇಶಿಸಿ ಎಸ್ ಡಿ ಪಿ ಐ ಕುಂಬ್ರ ಬ್ಲಾಕ್ ಅಧ್ಯಕ್ಷರಾದ ರಿಯಾಝ್ ಬಳಕ್ಕ ಇವರು ಮಾತನಾಡಿ ಎಸ್ ಡಿ ಪಿ ಐ ಈ ದೇಶದ ದಲಿತ ಧಮನಿತ ಮರ್ದಿತ ವರ್ಗಗಳ ಬೆನ್ನೆಲುಬಾಗಿದೆ, ಈ ದೇಶದಲ್ಲಿ ನ್ಯಾಯದ ಪರ ದ್ವನಿ ಎತ್ತುವವರನ್ನು ಕರಾಳ ಕಾನೂನುಗಳ ಮೂಲಕ ಜೈಲಿಗಟ್ಟಿ ಧಮನಿಸಲು ಹೊರಟಿದೆ , ಎಸ್ ಡಿ ಪಿ ಐ ರಾಷ್ಟ್ರೀಯ ಅದ್ಯಕ್ಷರಾದ ಎಂ ಕೆ ಫೈಝಿಯವರ ಅಕ್ರಮ ಬಂಧನವೇ ಇದಕ್ಕೆ ಸಾಕ್ಷಿಯಾಗಿದೆ ಎಂದು ನುಡಿದರು.

ಎಸ್ ಡಿ ಪಿ ಐ ಆರ್ಯಾಪು ಗ್ರಾಮ ಸಮಿತಿ ಅಧ್ಯಕ್ಷರಾದ ಬಶೀರ್ ವಾಗ್ಲೆ, ಕಾರ್ಯದರ್ಶಿ ಮಸೂದ್ ಸಂಟ್ಯಾರ್ ಹಾಗು ಎಸ್ ಡಿ ಪಿ ಐ ಸಂಟ್ಯಾರು ಬ್ರಾಂಚ್ ಅಧ್ಯಕ್ಷರಾದ ಝಕಾರಿಯಾ ಎಚ್ ಇ ಉಪಸ್ಥಿತರಿದ್ದರು.

ಎಸ್ ಡಿ ಪಿ ಐ ಸಂಟ್ಯಾರ್ ಬ್ರಾಂಚ್ ಕಾರ್ಯದರ್ಶಿ ಶಾಫಿ ಮರಿಕೆ ಸ್ವಾಗತಿಸಿ, ವಂದಿಸಿದರು.

About The Author

Leave a Reply