November 8, 2025
WhatsApp Image 2025-06-25 at 9.22.36 AM

ಈಗಿನ ಮಕ್ಕಳ ಮನಸ್ಸು ಬಹಳ ಸೂಕ್ಷ್ಮವಾಗಿರುತ್ತದೆ. ಪೋಷಕರು ಸ್ವಲ್ಪ ಏರು ಧ್ವನಿಯಲ್ಲಿ ಮಾತನಾಡಿದರೂ, ಆತ್ಮಹತ್ಯೆ ಹಾಗೂ ಇನ್ಯಾವುದೋ ಕಾರಣಕ್ಕೆ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುವಂತಹ ಕೆಲಸ ಮಾಡಿಕೊಳ್ಳುತ್ತಾರೆ. ಇದೀಗ ಶಾಲೆಗೆ ಯೂನಿಫಾರಂ ಧರಿಸದೆ ಹೋದರೆ, ಶಿಕ್ಷಕರು ಬೈತಾರೆ ಎಂದು ವಿಷ ಸೇವಿಸಿ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಹೌದು ಈ ಒಂದು ಘಟನೆ ಚಿಕ್ಕಮಗಳೂರಿನ ತರೀಕೆರೆಯ ಲಿಂಗದಹಳ್ಳಿ ಗ್ರಾಮದಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ನಿವೇದಿತಾ (13) ಆತ್ಮಹತ್ಯೆಗೆ ಶರಣಾಗಿರುವ ಬಾಲಕಿ. ಶಾಲಾ ಶಿಕ್ಷಕರು ವಿದ್ಯಾರ್ಥಿನಿಗೆ ಯುನಿಫಾರಂ ಅನ್ನು ನೀಡಿದ್ದಾರೆ. ಸೋಮವಾರದಿಂದ ಯೂನಿಫಾರಂ ಧರಿಸಿ ಶಾಲೆಗೆ ಬರುವಂತೆ ಶಿಕ್ಷಕರು ಸೂಚನೆ ನೀಡಿದ್ದರು.

ಪೋಷಕರು ಸಮವಸ್ತ್ರ ಹೊಲಿಯಲು ಟೈಲರ್ ಗೆ ನೀಡಿದ್ದಾರೆ. ಆದರೆ ಯೂನಿಫಾರಂ ರೆಡಿಯಾಗುತ್ತೆ ಶಿಕ್ಷಕರು ಹೊಡೆಯುತ್ತಾರೆ ಎಂದು ಮನೆಯಲ್ಲಿಯೇ ವಿಷ ಸೇವಿಸಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೋಮವಾರ ನಡೆದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.

About The Author

Leave a Reply