
ಬೆಂಗಳೂರಿನಲ್ಲಿ ಸೈಕೋ ಪತಿಯ ವಿರುದ್ಧ ಪತ್ನಿ ಠಾಣೆಯ ಮೆಟ್ಟಿಲು ಏರಿದ್ದು, ಪತಿಯ ವರ್ತನೆಗೆ ಬೇಸತ್ತು ಇದೀಗ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ. ಪತಿಯ ವಿರುದ್ಧ ಪತ್ನಿ ಬನಶಂಕರಿ ಠಾಣೆಗೆ ದೂರು ನೀಡಿದ್ದಾರೆ. ಯೂನಿಸ್ ಪಾಷಾ ಪತ್ನಿ ಹಲೀಮಾ ಸಾದಿ ದೂರು ನೀಡಿದ್ದಾರೆ. ರಾಜಕಾರಣಿಗಳು ಸಹಚರರೊಂದಿಗೆ ಮಲಗುವಂತೆಯೇ ಈತ ಪತ್ನಿಗೆ ಒತ್ತಾಯಿಸಿದ್ದಾನೆ.

ಅದಕ್ಕೆ ಪತ್ನಿ ಒಪ್ಪದಿದ್ದಕ್ಕೆ ಹಿಂಸೆ ಕೊಟ್ಟು ಆರು ಬಾರಿ ತಲಾಕ್ ನೀಡಿರುವ ಆರೋಪ ಕೇಳಿ ಬಂದಿದೆ. ಅಲ್ಲದೆ ಅತ್ತೆ, ಮಾವನ ವಿರುದ್ಧವು ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿದೆ. ಪತಿ ಅತ್ತೆ ಮಾವನ ವಿರುದ್ಧ ಮಹಿಳೆ ಸಾಲು ಸಾಲು ಆರೋಪ ಮಾಡಿದ್ದಾರೆ. ನ್ಯಾಯ ಕೊಡಿಸಿ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಬನಶಂಕರಿ ಠಾಣೆಯಲ್ಲಿ ಯುನಿಸ್ ಮತ್ತು ತಂದೆ-ತಾಯಿ ವಿರುದ್ಧ FIR ದಾಖಲಾಗಿದೆ.

ತಲೆಗೆ ಗನ್ ಇಟ್ಟು ಬೆದರಿಸಿರುವ ಯೂನಿಸ್ ಪಾಷ ಪತ್ನಿ ಮನೆಯವರಿಗೆಲ್ಲ ಮಚ್ಚು ತೋರಿಸಿ ಬೆದರಿಸುತ್ತಾನೆ. ಪತಿ ಮಾತ್ರವಲ್ಲ ಅತ್ತೆ ಮಾವನಿಂದಲೂ ನಿರಂತರವಾಗಿ ಕಿರುಕುಳ ಆರೋಪ ಕೇಳಿ ಬಂದಿದೆ. ಮಸಾಜ್ ಮಾಡುವಂತೆ ಸೊಸೆಗೆ ಮಾವ ಡಿಮ್ಯಾಂಡ್ ಮಾಡುತ್ತಾನೆ ಎಂದು ಆರೋಪ ಕೇಳಿ ಬಂದಿದ್ದು, ಪತಿ ಅತ್ತೆ ಮಾವ ಎಲ್ಲರ ವಿರುದ್ಧ ಬನಶಂಕರಿ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ಸಹ ದಾಖಲಾಗಿದೆ.
