October 12, 2025
WhatsApp Image 2025-07-04 at 9.07.25 AM

ಮಂಗಳೂರಿನ ಪಡುಶೆಡ್ಡೆ ಗ್ರಾಮದ ಹಾಲಾಡಿ ಎಂಬ ಸ್ಥಳದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ತಯಾರಿ ನಡೆಸುತ್ತಿರುವ  ವೇಳೆಗೆ   ದಾಳಿ ಮಾಡಿದ ಪೊಲೀಸರು ಐವರು ಆರೋಪಿಗಳನ್ನು ಜುಲೈ 2 ರಂದು ಬಂಧಿಸಿದ್ದಾರೆ.

ಆರೋಪಿಗಳ ವಿವರ ಇಂತಿದೆ..

1) ತುಷಾರ್ @ ಸೋನು ಪ್ರಾಯ 21 ವರ್ಷ ತಂದೆ: ರಾಜೇಶ್ ತಾರನಾಥ್ ವಾಸ: ಅಡು ಮರೋಳಿ, ಬಿಕರ್ನಕಟ್ಟೆ, ಮಂಗಳೂರು

2) ಧನ್ವಿ ಶೆಟ್ಟಿ ಪ್ರಾಯ 20 ವರ್ಷ ತಂದೆ: ಬಾಲಕೃಷ್ಣ ಶೆಟ್ಟಿ ವಾಸ: ನಾಗುರಿ, ಮಂಗಳೂರು

3) ಸಾಗರ್ ಕರ್ಕೇರಾ ಪ್ರಾಯ 19 ವರ್ಷ ತಂದೆ: ಶೀತಲ್ ಕುಮಾರ್ ವಾಸ: ಜಲ್ಲಿಗುಡ್ಡೆ, ಮಂಗಳೂರು

4) ವಿಕಾಸ್ ಥಾಪ @ ಪುಚ್ಚಿ ಪ್ರಾಯ 23 ವರ್ಷ ತಂದೆ: ರಾಜು ಥಾಪ ವಾಸ: ಶಕ್ತಿನಗರ, ಮಂಗಳೂರು

5) ವಿಘ್ನೇಶ್ ಕಾಮತ್ ಪ್ರಾಯ 24 ವರ್ಷ ತಂದೆ: ದಿ|| ಹರೀಶ್ ಕಾಮತ್ ವಾಸ: ಅಳಕೆ, ಕಂಡೆಟ್ಟು, ಮಂಗಳೂರು

ಇನ್ನು ದಾಳಿ ವೇಳೆ ಪ್ರತಿಯೊಬ್ಬರ ಬಳಿ  01 ಕೆ.ಜಿ ಗಿಂತ ಹೆಚ್ಚಿನ ಪ್ರಮಾಣದಲ್ಲಿದ್ದ ಗಾಂಜಾ ಹಾಗೂ  ಗಾಂಜಾ ಪ್ಯಾಕೇಟ್ ಸೇರಿದಂತೆ ಒಟ್ಟು 5.759 ಕೆ.ಜಿ ತೂಕದ ರೂ 5,20,000/- ಮೌಲ್ಯದ ನಿಷೇಧಿತ ಮಾದಕ ವಸ್ತುವಾದ ಗಾಂಜಾ ಮತ್ತು ಆರೋಪಿತರು ಕೃತ್ಯಕ್ಕೆ ಬಳಸಿದ 06- ಮೊಬೈಲ್  ಫೋನ್, 1- ದ್ವಿಚಕ್ರ ವಾಹನ ವನ್ನು ವಶಪಡಿಸಿಕೊಳ್ಳಲಾಗಿದೆ.

05 ಜನ ಆರೋಪಿತರು ಮಂಗಳೂರು ನಗರದಲ್ಲಿ  ಮಾದಕ ವಸ್ತುವಾದ ಗಾಂಜಾವನ್ನು  ಮಾರಾಟ (ಪೆಡ್ಲರ್) ಮಾಡುವವರಾಗಿರುತ್ತಾರೆ.  ಗಾಂಜಾವನ್ನು ಚಿಕ್ಕ ಚಿಕ್ಕ ಪ್ಯಾಕೇಟ್ ಗಳ್ಲಲಿ  ಪ್ಯಾಕ್ ಮಾಡಿ ಪ್ರತಿ ಗಾಂಜಾ ಪ್ಯಾಕೇಟ್ ಗೆ   ರೂ 1000 ದಂತೆ  ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ತನಿಖೆ ಮುಂದುವರೆದಿದ್ದು, ಈ ಆರೋಪಿತರಿಗೆ  ಎಲ್ಲಿಂದ ಗಾಂಜಾ ಪೂರೈಕೆ ಯಾಗುತ್ತಿದೆ ಎಂದು ಶೀಘ್ರದಲ್ಲಿ  ಪತ್ತೆ ಹಚ್ಚಲಾಗುವುದು. ಪ್ರಕರಣದ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರದ  ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಂಗಳೂರು ನಗರದ ಸೆನ್ ಕ್ರೈಂ ಪೊಲೀಸ್ ಠಾಣಾ ಅಧಿಕಾರಿ ಮತ್ತು  ಸಿಬ್ಬಂದಿರವರು ಭಾಗವಹಿಸಿರುತ್ತಾರೆ.

About The Author

Leave a Reply