SSF ರಾಜ್ಯ ಸಮಿತಿ ಹಮ್ಮಿಕೊಂಡ ಸೌಹಾರ್ದ ನಡಿಗೆ ಕಾರ್ಯಕ್ರಮದ ಸಮಾರೋಪದಲ್ಲಿ ಭಾಗವಹಿಸಿದ ಸಭಾಧ್ಯಕ್ಷ ಯು.ಟಿ.ಖಾದರ್

ರಾಜ್ಯದಲ್ಲಿ ನಡೆಯುತ್ತಿರುವ ಕೋಮುವಾದಕ್ಕೆ ಕಡಿವಾಣ ಹಾಕಲು, ಎಸ್‌ಎಸ್‌ಎಫ್ ಕರ್ನಾಟಕವು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ‘ಮನಸ್ಸು ಮನಸ್ಸುಗಳನ್ನು ಪೋಣಿಸುವ’ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿರುವ ‘ಸೌಹಾರ್ದ ನಡಿಗೆ’ಯ ಸಮಾರೋಪದಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್ ಭಾಗವಹಿಸಿದರು.

ರಾಜ್ಯದ 20 ಪಟ್ಟಣಗಳಲ್ಲಿ ನಡೆದ ಸೌಹಾರ್ದ ನಡಿಗೆ ಕಾರ್ಯಕ್ರಮದ ಸಮಾರೋಪದಲ್ಲಿ ಬೇಲಿ ಮಠದ ಶಿವರುದ್ರ ಸ್ವಾಮೀಜಿ, ಧಮ್ಮವೀರ ಭಂತೆ, ಸೇಂಟ್ ಜೋಸೆಫ್ ಇಂಡಿಯನ್ ಸ್ಕೂಲ್ ಪ್ರಾಂಶುಪಾಲ ಧರ್ಮಗುರು ಸಿರಿಲ್ ಮೆನೆಜಸ್ ಎಸ್.ಜೆ, ರಾಜ್ಯ ಯುವಜನ ಸಂಘದ ಅಧ್ಯಕ್ಷ ಬಶೀರ್ ಸ‌ಅ‌ದಿ ಪೀಣ್ಯ, ಎಸ್ಸೆಸ್ಸೆಫ್ ರಾಜ್ಯಧ್ಯಕ್ಷ ಸುಫಿಯಾನ್ ಸಖಾಫಿ, ಎಸ್.ವೈ.ಎಸ್, ರಾಜ್ಯ ಸಾಂತ್ವನ ಅಧ್ಯಕ್ಷ ಇಬ್ರಾಹಿಂ ಸಖಾಫಿ ಪಯೋಟ, ಸ್ವಾಗತ ಸಮಿತಿ ಚೇರ್ಮಾನ್ ಸ್ವಾಲಿಹ್ ಟಿ.ಸಿ. ಮುಂತಾದವರು ಭಾಗವಹಿಸಿದ್ದರು.

Leave a Reply