August 25, 2025
WhatsApp Image 2025-07-08 at 12.13.31 PM

ಪುತ್ತೂರು: ರಾಜ್ಯ ಸರಕಾರ ಹಿಂದೂ ವಿರೋಧಿ ಧೋರಣೆಯ ಮೂಲಕ ಹಿಂದೂ ಸಂಘಟನೆಗಳ ಸಾಮಾಜಿಕ ಕಾರ್ಯಕರ್ತರ ಮೇಲೆ ಕಾನೂನು ವಿರೋಧಿ ಕ್ರಮಗಳನ್ನು ನಡೆಸುತ್ತಿದೆ ಎಂದು ರಾಜ್ಯ ಸರಕಾರದ ನಿಲುವನ್ನು ಖಂಡಿಸಿ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಪರಿವಾರ ಸಂಘಟನೆಗಳ ಸಹಭಾಗಿತ್ವದಲ್ಲಿ ದರ್ಬೆಯಲ್ಲಿ ಜು.7 ಕ್ಕೆ ಬೃಹತ್‌ ಪ್ರತಿಭಟನೆ ನಡೆಯಿತು.

ಹಿಂದು ಜಾಗರಣ ವೇದಿಕೆ ಕರ್ನಾಟಕ ಪ್ರಾಂತದ ಕಾರ್ಯಾಕಾರಿಣಿ ಸದಸ್ಯ ಅಜಿತ್ ಕೊಡಗು ಅವರು ಮಾತನಾಡಿ ರಾಜ್ಯದ ಕಾಂಗ್ರೆಸ್ ಸರಕಾರ ಇವತ್ತು ಹಿಂದು ಕಾರ್ಯಕರ್ತರನ್ನು ಯಾವುದೇ ಕಾರ್ಯಕ್ರಮಕ್ಕೆ ಹೋಗದಂತೆ ಅಡ್ಡಿಪಡಿಸುವ ಕೆಲಸ ಮಾಡುತ್ತಿದೆ. ದ ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಸರಕಾರ ಇಸ್ಲಾಮಿಕ್ ಒಟ್ ಬ್ಯಾಂಕ್ ಗಾಗಿ ರಾಜಕಾರಣ ಮಾಡುತ್ತಿದೆ. ಸ್ವಾತಂತ್ರ ಪೂರ್ವದಲ್ಲೂ ಯಾವುದೇ ಕಾರಣಕ್ಕೂ ದೇಶ ಇಸ್ಲಾಮಿಕ್ ಆಗಲಿಲ್ಲ ಕಾರಣ ಇಷ್ಟೆ. ಆಗ ದೇಶ ಭಕ್ತರು ಮತಾಂತರ ಅಗಲಿಲ್ಲ. ಅವತ್ತಿನ ಕಾಲಗಟ್ಟದಲ್ಲಿ ಕೂಡಾ ಸೋಗಲಾಡಿತನ ಇತ್ತು. ಆದರೂ ಈ ಧರ್ಮವನ್ನು ಅಲುಗಾಡಿಸಲು ಆಗಲಿಲ್ಲ. ಇವತ್ತು ಕಾರ್ಯಕರ್ತರ ಹತ್ಯೆಗೆ ಸೂಪಾರಿಯನ್ನು ಸರಕಾರ ನೀಡುತ್ತಿದೆ. ಇಂತಹ ಸಮಾಜವನ್ನು ಪ್ರಚೋಧಿಸುವ ಸಚಿವರಿಗೆ ಕೇಸ್ ಹಾಕಬೇಕು. ಆದರೆ ಸರಕಾರ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಅಧಿಕಾರವನ್ನು ದುರುಪಯೋಗ ಮಾಡುತ್ತಿದೆ. ಹಿಂದು ಸಮಾಜವನ್ನು ಮುಟ್ಟಲು ಬರಬೇಡಿ. ನಾವು ಯಾರ ತಂಟೆಗೂ ಹೋಗುವುದಿಲ್ಲ. ನಮ್ಮ ತಂಟೆಗೆ ಬಂದರೆ ನಾವು ಸುಮ್ಮನಿರುವುದಿಲ್ಲ. ನಾವು ಯಾರಿಗೂ ಬಗ್ಗುವವರಲ್ಲ ಜಗ್ಗುವವರಲ್ಲ ಎಂದರು. ಹಿಂದುಗಳಿಗಾಗಿ ಇರುವ ರಾಷ್ಟ್ರ, ಇದು ಒಂದೆ. ನಿಮ್ಮ ರಾಜಕಾರಣಕ್ಕಾಗಿ ನಾವು ಭಯೋತ್ಪಾದನೆಗಾಗಿ ಹೋರಾಟ ಮಾಡುತ್ತಿಲ್ಲ. ನಾವು ನಮ್ಮ ರಾಷ್ಟ್ರ ಧರ್ಮ ಉಳಿಸಲು ಹೋರಾಟ ಮಾಡುತ್ತಿದ್ದೇವೆ ಎಂದರು.

ಪುತ್ತೂರು ಜಿಲ್ಲಾ ಸಂಯೋಜಕ ಮೋಹನ್ ದಾಸ್ ಕಾಣಿಯೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾಂಗ್ರೆಸ್ ಸರಕಾರ ಅಧಿಕಾರ ಬಂದ ಬಳಿಕ ಹಿಂದು ವಿರೋಧಿ ಧೋರಣೆಯನ್ನು ಮಾಡುತ್ತಾ ಬಂದಿದೆ. ಭ್ರಷ್ಟ ಮತ್ತು ಹಿಂದು ವಿರೋಧಿ ನೀತಿ ಅನುಸರಿಸಿ ಕರಾವಳಿಯ ಎಲ್ಲಾ ಹಿಂದು ಸಂಘಟನೆಯ ನಾಯಕರ ವಿರುದ್ಧ ಕೇಸು ದಾಖಲಿಸುವ ಕೆಲಸ ಮಾಡುತ್ತಿದೆ. ಸರಕಾರ ನಡೆಸುವ ಮುಖ್ಯಮಂತ್ರಿಯ ಅನುಯಾಯಿಯಾಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಇವತ್ತು ದೇಶದ ಎಲ್ಲಾ ಕಡೆ ಕಾಂಗ್ರೆಸ್ ನಶಿಸುತ್ತಾ ಹೋಗುತ್ತಿದೆ. ಅದೇ ರೀತಿ ರಾಜ್ಯದಲ್ಲಿ ಎಣ್ಣೆ ಆರಿದ ನಂತರ ಬತ್ತಿ ಬಗ್ಗೆ ಹಂತ ಉರಿದಂತೆ ಕಾಂಗ್ರೆಸ್ ಆಡಳಿತದ ಕೊನೆ ಬಂದಿದೆ. ಸಮಾಜದ ಸ್ವಾಸ್ತ್ರ ಮತ್ತು ಅಶ್ಮಿತೆಯನ್ನು ಕಾಪಾಡಲು ಹಿಂದು ಸಂಘಟನೆ ಎದ್ದು ನಿಂತಿದೆ. ಮುಂದಿನ ದಿನ ಎಲ್ಲಾ ಸವಾಲುಗಳನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದರು.

ಹಿಂಜಾವೆಯ ನಿಧಿ ಪ್ರಮುಖ್ ರವಿರಾಜ್ ಶೆಟ್ಟಿ ಕಡಬ, ದಿನೇಶ್ ಪಂಜಿಗ ಕಾರ್ಯಕ್ರಮ ನಿರ್ವಹಿಸಿದರು. ಹಿಂದು ಜಾಗರಣ ವೇದಿಕೆಯ ಹಲವಾರು ಮುಖಂಡರು, ಬಿಜೆಪಿ ಪ್ರಮುಖರು, ಪರಿವಾರ ಸಂಘಟನೆಗಳು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

About The Author

Leave a Reply