August 25, 2025
WhatsApp Image 2025-07-08 at 5.09.09 PM

ಮಂಗಳೂರು: ಅಲ್‌ ಮದೀನಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಿದ್ದೀಕ್ ಪಾಂಡವರಕಲ್ಲು ಎಂಬಾತ ಮುಸ್ಲಿಂ ಸಮುದಾಯದ ಯುವತಿಯರಿಗೆ ಮದುವೆ ಮಾಡಿಸುವ ನೆಪದಲ್ಲಿ ಪ್ರೌಡ್ ಫಂಡ್‌ ಸಂಗ್ರಹ ಮಾಡುವುದಲ್ಲದೆ ಯುವತಿಯರ ಮೊಬೈಲ್ ನಂಬರ್ ಪಡೆದು, ತನ್ನ ಆನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾನೆ ಎಂದು ಅವರಿಗೆ ಕಿರುಕುಳ ನೀಡುತ್ತಿದ್ದ ಎಂದು ಇನ್ನೊಂದು ಸಂಸ್ಥೆಯವರು ನನಗೆ ತಿಳಿಸಿ ಸಹಾಯ ಯಾಚಿಸಿದ್ದರು. ಆಗ ತಾನು ವಿಷಯದ ಸತ್ಯಾಸತ್ಯತೆಯನ್ನು ತಿಳಿಯಲು ಸಿದ್ದೀಕ್ ನನ್ನು ವಿಚಾರಿಸಿದ್ದು ಆತ ತನ್ನ ತಪ್ಪನ್ನು ಮರೆಮಾಡಲು ಆತ್ಮಹತ್ಯೆಗೆ ಪ್ರಯತ್ನಿಸಿ ವಿಫಲವಾಗಿದ್ದಾಬೆ. ಈಗ ಜನರಿಗೆ ಮುಖ ತೋರಿಸಲು ನಾಚಿಕೆಪಟ್ಟು ಆತ ನನ್ನ ವಿರುದ್ಧವೇ ಪೊಲೀಸ್‌ ಠಾಣೆಯಲ್ಲಿ ಸುಳ್ಳು ಕೇಸ್ ದಾಖಲಿಸಿದ್ದಾಗಿ ದಿ ವಾಯ್ಸ್ ಬ್ಲಡ್ ಡೋನರ್ಸ್ ಮಂಗಳೂರು ಸ್ಥಾಪಕ ಅಬ್ದುಲ್ ರವೂಫ್ ಬಂದರ್‌ ಆರೋಪಿಸಿದ್ದಾರೆ.

ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‌ನಾನು ವಾಯ್ಸ್ ಆಪ್ ಬ್ಲಡ್ ಡೋನರ್ಸ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಅದರ ಮೂಲಕ ವಿವಿಧ ಪ್ರದೇಶಗಳಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ದಾಖಲೆಯ ಮಟ್ಟದಲ್ಲಿ ರಕ್ತದಾನ ಮಾಡಿಸಿ, ಜನರಿಗೆ ಉಚಿತ ಅಂಬುಲೆನ್ಸ್ ಸೇವೆ ಕಲ್ಪಿಸಿ ವಿಕಲಚೇತನರಿಗೆ ವೀಲ್ ಚೇರ್ ಮುಂತಾದ ಪರಿಕರಗಳು ನೀಡುತ್ತಾ ನಿರಂತರವಾಗಿ ಸಮಾಜ ಸೇವೆ ಮಾಡುತ್ತಾ ಬಂದಿದ್ದೇನೆ. ನನ್ನೊಂದಿಗೆ ಸಮಾಜದ ನೂರಾರು ಗಣ್ಯರು, ಯುವಕರು ಕೈಜೋಡಿಸಿದ್ದಾರೆʼ ಎಂದು ಹೇಳಿದರು.

ಸಿದ್ದೀಕ್ ಪಾಂಡವರಕಲ್ಲು ಮುಸ್ಲಿಂ ಸಮುದಾಯದ ಅಮಾಯಕ ಯುವತಿಯರನ್ನು ತನ್ನ ತೀಟೆ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದ ಮತ್ತು ಬಡ ಹೆಣ್ಣುಮಕ್ಕಳಿಗೆ ಮದುವೆ ಮಾಡಿಸುವುದಾಗಿ ಹಣ ಸಂಗ್ರಹಿಸಿದ್ದ. ಬಂದ ಹಣದಲ್ಲಿ ಮುಕ್ಕಾಲು ಪಾಲು ತಾನು ಇಟ್ಟುಕೊಂಡು ಬಾಕಿ ಉಳಿದ ಭಾಗವನ್ನು ಮಾತ್ರ ಬಡ ಕುಟುಂಬಕ್ಕೆ ನೀಡುತ್ತಿದ್ದ. ಸಮಾಜದ ಪ್ರತಿಷ್ಠಿತ ವ್ಯಕ್ತಿಗಳನ್ನು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುವ ನೀಚ ಕೃತ್ಯಕ್ಕೂ ಸಿದ್ದೀಕ್ ಪಾಂಡವರಕಲ್ಲು ಇಳಿಯುತ್ತಿದ್ದ. ಈತ ಸಮಾಜಕ್ಕೊಂದು ಪಿಡುಗಾಗಿ ಪರಿಣಮಿಸಿದ್ದಾನೆ. ಆದುದರಿಂದ ನಾನು ಪ್ರಾಮಾಣಿಕವಾಗಿ ವಿಚಾರಿಸಿದ್ದ ಮಾತ್ರಕ್ಕೆ ನನ್ನ ವಿರುದ್ಧ ಕೇಸು ದಾಖಲಿಸಿದ್ದಾನೆ ಎಂದು ರವೂಫ್ ಸ್ಪಷ್ಟೀಕರಣ ನೀಡಿದರು.

ಸಿದ್ದೀಕ್‌ ಕುತಂತ್ರಗಳಿಗೆ ತಲೆಬಾಗುವ ಪ್ರಶ್ನೆಯೇ ಇಲ್ಲ. ಕಾನೂನಾತ್ಮಕವಾಗಿ ಆತ ಮಾಡುತ್ತಿರುವ ಅನ್ಯಾಯವನ್ನು ಸಮಾಜದ ಮುಂದೆ ಬಿಚ್ಚಿಡುತ್ತೇನೆ. ಮಾತ್ರವಲ್ಲ ಬಡ ಕುಟುಂಬದ ಯುವತಿಯರಿಗೆ ಅನ್ಯಾಯ ಮಾಡಿರುವುದನ್ನು ಕೂಡ ಜನರ ಮುಂದೆ ಇದುತ್ತೇನೆ. ಬಡವರ್ಗದ ಯುವತಿಯರು ಈತನಿಗೆ ವೈಯುತ್ತಿಕ ಮೊಬೈಲ್ ನಂಬರ್ ಕೊಡದೆ ಜಾಗೃತರಾಗಿರಬೇಕು ಎಂದು ರವೂಫ್‌ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದ ವಾಯ್ಸ್‌ ಆಫ್‌ ಬ್ಲಡ್‌ ಡೋನರ್ಸ್‌ ಉಪಾಧ್ಯಕ್ಷ ಸಾದಿಕ್‌ ಸಾಲೆತ್ತೂರು, ಕಾರ್ಯದರ್ಶಿ ರುಬಿಯಾ ಅಕ್ತರ್‌  ಇ ದ್ದರು.

About The Author

Leave a Reply