ಬೆಳ್ತಂಗಡಿ : ಮೃತದೇಹ ಹೂತು ಹಾಕಿದ ಪ್ರಕರಣ: ವಿಶೇಷ ತನಿಖಾ ಸಂಸ್ಥೆ(SIT)ಗೆ ಪ್ರಕರಣ ವರ್ಗಾವಣೆ

‘ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಆರೋಪ ಪ್ರಕರಣ’ವನ್ನು ವಿಶೇಷ ತನಿಖಾ ತಂಡ(ಎಸ್.ಐ.ಟಿ)ಕ್ಕೆ ವರ್ಗಾಯಿಸಿ ರಾಜ್ಯ ಸರಕಾರ ಶನಿವಾರ (ಜು.19) ಆದೇಶಿಸಿದೆ

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಶೀಘ್ರದಲ್ಲೇ ವಿಶೇಷ ತನಿಖಾ ತಂಡವು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

ಠಾಣಾ ಅ.ಕ್ರ 39/2025ಕ್ಕೆ ಸಂಬಂಧಿಸಿದಂತೆ, ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಿ ದಿನಾಂಕ 19.07.2025 ರಂದು ಮಾನ್ಯ ಕರ್ನಾಟಕ ಸರ್ಕಾರವು ಅದೇಶಿಸಿರುತ್ತದೆ. ಶೀಘ್ರದಲ್ಲೇ ವಿಶೇಷ ತನಿಖಾ ತಂಡವು ಪ್ರಕರಣವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ” ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶೇಷ ತನಿಖಾ ಸಂಸ್ಥೆ (SIT) ಯ ಮುಖ್ಯಸ್ಥರಾಗಿ ಐಪಿಎಸ್ ಪ್ರಣವ ಮೋಹಾಂತಿ ಹಾಗೂ ಸದಸ್ಯರಾಗಿ ಐಪಿಎಸಸ್‌ಗಳಾದ ಎಂ.ಎನ್.ಅನುಚೇತ್, ಸೌಮ್ಯಲತ, ಜಿತೇಂದ್ರ ಕುಮಾರ್ ದಯಾಮ ರವರನ್ನು ಸರಕಾರ ನೇಮಿಸಿದೆ.

Leave a Reply