August 25, 2025
WhatsApp Image 2025-07-29 at 9.39.50 AM

ಬೆಳ್ತಂಗಡಿ: ಗ್ರಾಮದ ಮೂಕಾಂಬಿಕಾ ನಿಲಯ ಪಚ್ಚಡಿ ಮನೆಯ ವಾಣಿಶ್ರೀ(26ವ) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜು.28ರಂದು ನಡೆದಿದೆ.

ಮದುವೆಯಾಗಿ ಒಂದು ವರ್ಷ ಮೂರು ತಿಂಗಳು ಆಗಿರುವ ವಿವಾಹಿತ ಮಹಿಳೆ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಯಾರು ಇಲ್ಲದ ವೇಳೆ ವಿಷವನ್ನು ಸೇವಿಸಿರುತ್ತಾರೆ. ಹೊಟ್ಟೆನೋವು ಎಂದು ಹೇಳಿದಾಗ ಪಕ್ಕದ ಮನೆಗೆ ತೆರಳಿದ್ದ ದೊಡ್ಡಮ್ಮರವರಿಗೆ ಅನುಮಾನ ಬಂದು ತಕ್ಷಣ ಗಂಡ ಯಾವುದೋ ಕಾರ್ಯಕ್ರಮಕ್ಕೆ ತೆರಳಿದ್ದ ಕಾರಣ ಮಹಿಳೆಯ ತಂದೆಗೆ ಕರೆ ಮಾಡಿರುತ್ತಾರೆ.

ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತಿ ಪ್ರಶಾಂತ್, ತಂದೆ ರಾಜು, ತಾಯಿ ಪ್ರೇಮ ಅವರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Leave a Reply