August 24, 2025
WhatsApp Image 2025-08-01 at 12.29.24 PM

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದೂರುದಾರ ತೋರಿಸಿದ್ದ 7ನೇ ಪಾಯಿಂಟ್ ನಲ್ಲಿ ಅಗೆತ ಕಾರ್ಯ ಆರಂಭವಾಗಿದೆ.

ಧರ್ಮಸ್ಥಳದಲ್ಲಿ ನಿನ್ನೆ ಆರನೇ ಪಾಯಿಂಟ್ ನಲ್ಲಿ ನೆಲ ಅಗೆಯುವಾಗ ಪುರುಷನ ಅಸ್ತಿಪಂಜರದ ಪಳಿಯುಳಿಕೆಗಳು ದೊರೆತಿದ್ದವು. ಇಂದು ಸಹ ಎಸ್ಐಟಿ ಅಧಿಕಾರಿಗಳು 6ನೇ ಪಾಯಿಂಟ್ ನಲ್ಲಿ ಮತ್ತಷ್ಟು ಎಲ್ಲ ಶೋಧ ಕಾರ್ಯ ಮುಂದುವರಿಸುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಎಸ್ಐಟಿ ಪಾಯಿಂಟ್ ಆರನ್ನು ಕೈಬಿಟ್ಟು ಇಂದು 7ನೇ ಪಾಯಿಂಟ್ ನಲ್ಲಿ ನೆಲ ಅಗೆಯುವ ಕಾರ್ಯ ಆರಂಭಿಸಿದೆ.

ಆರನೇ ಪಾಯಿಂಟ್ ನಲ್ಲಿ ನಿನ್ನೆ ಹನ್ನೆರಡು ಮೂಳೆಗಳು ಸಿಕ್ಕಿದ್ದವು. ಮಾನವನ ದೇಹದ 12 ಮೂಳೆಗಳು ಪತ್ತೆಯಾಗಿವೆ. ಕಾಲಿನ ಭಾಗದ ಮೂಳೆ ತಲೆ ಬುರುಡೆ ಹಾಗೂ ಚೂರುಗಳನ್ನು ಸಂಗ್ರಹಿಸಲಾಗಿದೆ. ಪಾಯಿಂಟ್ ನಂಬರ್ ಆರು ನೇತ್ರಾವತಿ ನದಿ ತೀರದಲ್ಲಿ ಬರುತ್ತದೆ. ಇದೀಗ 6ನೇ ಪಾಯಿಂಟ್ ಕೈ ಬಿಟ್ಟ ಎಸ್ಐಟಿ ಅಧಿಕಾರಿಗಳು 7ನೇ ಪಾಯಿಂಟ್ ನಲ್ಲಿ ಶೋಧಕಾರ್ಯ ಆರಂಭಿಸಿದ್ದು, ಮತ್ತೆ ಏನಾದರೂ ಮನುಷ್ಯನ ಅಸ್ತಿಪಂಜರಗಳು ದೊರೆಯುತ್ತಾ ಎನ್ನುವುದು ಕಾದು ನೋಡಬೇಕಾಗಿದೆ

About The Author

Leave a Reply