August 24, 2025
WhatsApp Image 2025-08-02 at 10.34.23 AM

ಪವರ್ ಟಿವಿ ಸುದ್ದಿವಾಹಿನಿಯ ಮುಖ್ಯಸ್ಥ ರಾಕೇಶ್ ಶೆಟ್ಟಿಯವರಿಂದ ಜಾತಿನಿಂದನೆ, ಧರ್ಮನಿಂದನೆ, ಮಹಿಳಾ ಅಪಮಾನಿಕಾರಿ ಪದಗಳ ಬಳಕೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೖಗೊಳ್ಳುವಂತೆಯೂ, ಸುದ್ದಿವಾಹಿನಿಯಿಂದ ವಜಾಗೊಳಿಸುವಂತೆ ಕೋರಿ.

ಧರ್ಮಸ್ಥಳ ಹತ್ಯಾ / ಹೂಳುವಿಕೆಯ ವಿರುದ್ಧ ಎಸ್. ಐ. ಟಿ ತನಿಖೆಗೆ ಸ್ವಾಗತ.

ದಿ ಕೇರಳ ಸ್ಟೋರಿ ಚಲನಚಿತ್ರದ ಪ್ರಸಾರದ ಮೂಲಕ ದೇಶದ ನಾನಾ ಭಾಗದ ಸಾವಿರಾರು ಯುವತಿಯರು ಕಣ್ಮರೆಯ ಬಗ್ಗೆ ಪ್ರದರ್ಶನಗೊಂಡಿದ್ದು, ಈ ಬಗ್ಗೆ ಎನ್. ಐ. ಎ ತನಿಖೆ ನಡೆಸುವಂತೆ ಕೇಂದ್ರ ಸರಕಾರಕ್ಕೆ ಆಗ್ರಹಿಸಲು ಒತ್ತಾಯ.

ಇತ್ತೀಚೆಗೆ ಧರ್ಮಸ್ಥಳ ಪವಿತ್ರವಾದ ಕ್ಷೇತ್ರದ ಪರಿಸರದಲ್ಲಿ ಯುವತಿಯರ ಹತ್ಯೆ ಹಾಗೂ ಹೂಳುವಿಕೆಯ ಬಗ್ಗೆ ಭೀಮಾ ಎಂಬವರು ದೂರನ್ನು ನೀಡಿದ್ದು, ಆ ಹೆಸರನ್ನು ಮುಂಡಿಟ್ಟು ರಾಕೇಶ್ ಶೆಟ್ಟಿಯವರು ಅಲ್ಲಾಹ್ ಎಂಬ ಹೆಸರಿಡು ಎಂದು ಧರ್ಮನಿಂದನೆ ಮಾಡಿರುತ್ತಾರೆ. ತದ ನಂತರ ಮುಲ್ಲಾ ಎಂಬ ಹೆಸರಿನಿಂದ ಕರೆ ಎಂದು ಜಾತಿ ನಿಂದನೆ ಮಾಡಿರುತ್ತಾರೆ. ಇದು ಅಕ್ಷಮ್ಯ ಅಪರಾಧ. ಅಷ್ಟೇ ಅಲ್ಲದೇ ಭಾರತ ದೇಶವು ಮಹಿಳಾ ಪ್ರಧಾನ ದೇಶವಾಗಿದ್ದು, ಮಹಿಳೆಯರ ಬಗ್ಗೆ ತೀರಾ ಅಸಹ್ಯ, ಅಸಭ್ಯ ಪದವನ್ನು ಪ್ರಸಾರ ಮಾಡಿರುತ್ತಾರೆ. ದ. ಕ ಜಿಲ್ಲೆಯಲ್ಲಿ ಸರ್ವ ಧರ್ಮಿಯರೂ ಅನ್ಯೋನ್ಯತೆಯಿಂದ ಬಾಳುತ್ತಿದ್ದು, ಧರ್ಮಸ್ಥಳದ ಬಗ್ಗೆ ಪ್ರಸ್ತಾಪಿಸಿ ಕೋಮು ಸೌಹಾರ್ದತೆಗೆ ಧಕ್ಕೆ ತಂದು ತನಿಖೆಯ ಹಿನ್ನಡೆಯ ಉದ್ದೇಶವಾಗಿರುತ್ತದೆ. ಸದ್ರಿ ಅವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೖಗೊಳ್ಳುವಂತೆಯೂ, ಸುದ್ದಿ ವಾಹಿನಿಯಿಂದ ವಜಾಗೊಳಿಸುವಂತೆಯೂ ಒತ್ತಾಯಿಸುತ್ತೇವೆ.

ಎಸ್. ಐ. ಟಿ ತನಿಖೆಗೆ ಸ್ವಾಗತ
ದೇಶಾದಾದ್ಯಂತ ಮಹಿಳೆಯರು ಕಾಣೆಯಾಗಿದ್ದು ಈ ಬಗ್ಗೆ ಎನ್. ಐ. ಎ ತನಿಖೆ ನಡೆಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸುವಂತೆ ಆಗ್ರಹ.
ರಾಜ್ಯ ಸರಕಾರವು ಎಸ್. ಐ. ಟಿ ತನಿಖೆಗೆ ಆದೇಶಿಸಿರುವುದನ್ನು ಮುಸ್ಲಿಂ ಲೀಗ್ ಸ್ವಾಗತಿಸುತ್ತದೆ ಮತ್ತು ದಿ ಕೇರಳ ಸ್ಟೋರಿ ಚಲನ ಚಿತ್ರದ ಮೂಲಕ ದೇಶದ ನಾನಾ ಭಾಗಗಳಿಂದ ಸಾವಿರಾರು
ಮಹಿಳೆಯರ ಸತ್ಯ ಘಟನೆ ಪ್ರದರ್ಶನವಾಗಿದ್ದು,ಈ ಬಗ್ಗೆ ಕೇಂದ್ರ ಸರಕಾರ ತನಿಖೆ ನಡೆಸುವಂತೆ ರಾಜ್ಯ ಸರಕಾರ ಆಗ್ರಹಿಸುವಂತೆ ಒತ್ತಾಯಿಸುತ್ತೇವೆ.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸಿ. ಅಬ್ದುರ್ರಹ್ಮಾನ್ ಮಂಗಳೂರು, ಜಿಲ್ಲಾ ಕೋಶಾಧಿಕಾರಿ ರಿಯಾಝ್ ಹರೇಕಳ, ಉಪಾಧ್ಯಕ್ಷರಾದ ಮುಹಮ್ಮದ್ ಇಸ್ಮಾಯಿಲ್, ಸದಸ್ಯರಾದ ಕೆ. ಸಿ ಅಬ್ದುಲ್ ಖಾದರ್ ಮತ್ತಿತ್ತರರು ಇದ್ದರು.

About The Author

Leave a Reply