
ಮಂಗಳೂರು; ವಾಹನಕ್ಕೆ ಸೈಡ್ ಕೋಡೋ ವಿಚಾರದಲ್ಲಿ ಆಟೋ ಚಾಲಕ ಹಾಗೂ ಕಾರಿನ ಪ್ರಯಾಣಿಕರ ಮಧ್ಯೆ ಹೊಡದಾಟ ನಡೆದಿರುವ ಘಟನೆ ಮಂಗಳೂರಿನ ಪಂಪ್ವೆಲ್ ನಿಂದ ಕಂಕನಾಡಿ ಸಂಪರ್ಕಿಸುವ ರಸ್ತೆಯಲ್ಲಿ ನಡೆದಿದೆ.


ವಾಹನಕ್ಕೆ ಸೈಡ್ ಕೊಡುವ ವಿಚಾರಕ್ಕೆ ಆಟೋ ಚಾಲಕ ಮತ್ತು ಕಾರು ಪ್ರಯಾಣಿಕರ ಮಧ್ಯೆ ಹೊಡೆದಾಟ ನಡೆದಿದೆ. ಇದೇ ವೇಳೆ ಅದೇ ಮಾರ್ಗವಾಗಿ ಬಂದ ಅಂಬ್ಯುಲೆನ್ಸ್ ಗೂ ದಾರಿ ನೀಡದೆ ಗುಂಪು ಹೊಡೆದಾಡಿಕೊಂಡಿದೆ ಎನ್ನಲಾಗಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಪೊಲೀಸರು ಅಗಸ್ಟ್ 1 ರಂದು ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬಳಿಕ ಗಲಾಟೆ ಮಾಡಿದವರೇ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ ಎಂದಿದ್ದಾರೆ.
