SDPI ಕಾರ್ಯಕರ್ತರ ಮನೆಗಳಿಗೆ NIA ದಾಳಿ ರಾಜಕೀಯ ಪ್ರೇರಿತ..!!

ಮಂಗಳೂರು: ದಕ್ಷಿಣ ಕನ್ನಡ ಎಸ್ಡಿಪಿಐ ಕಾರ್ಯಕರ್ತರ ಮನೆಗಳಿಗೆ NIA ದಾಳಿ ರಾಜಕೀಯ ಪ್ರೇರಿತ ಇದು ಖಂಡನೀಯ ಎಂದು ಎಸ್ಟಿಪಿಐ ದ.ಕ ಜಿಲ್ಲಾ(ನಗರ) ಅಧ್ಯಕ್ಷ ಜಲೀಲ್ ಕೃಷ್ಣಪುರ ಹೇಳಿದರು. ಪಕ್ಷದ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಡಿಪಿಐ‌ ಕಾರ್ಯಕರ್ತರನ್ನು ವಿಚಲಿತ ಮಾಡಲು ಪ್ರಯತ್ನಿಸಿದರೆ ಕಾನೂನು ಹೋರಾಟ ಮತ್ತು ಬೀದಿ ಹೋರಾಟ ಮಾಡುತ್ತೇವೆ ಎಚ್ಚರಿಕೆಯನ್ನು ನೀಡಿದರು.

ಧರ್ಮಸ್ಥಳ ಆಹಜ ಸಾವುಗಳ ಬಗ್ಗೆ ಮಾತನಾಡಿದ ಕಾರಣಕ್ಕೆ ಬಿಜೆಪಿ ದಾಳಿ ಮಾಡುವ ಮೂಲಕ ದ್ಚೇಷ ರಾಜಕಾರಣ ಮಾಡುತ್ತಾ ಇದ್ದಾರೆ ಎಂದು ಕಿಡಿಕಾರಿದರು.

ಕುಡುಪು ಅಶ್ರಫ್ ಹತ್ಯೆಯನ್ನು ಎಸ್ಐಟಿ ಕೊಡಬೇಕು ಎಂದು ಪದೇ ಪದೇ ಹೇಳಿದ್ದೆವು, ರಹೀಮಾನ್ ಹತ್ಯೆಗೆ ಯುಎಪಿಎ ಕೇಸು ಕೂಡ ದಾಖಲಾಗಲಿಲ್ಲ ಇದು ಅನ್ಯಾಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಮೌನವಾಗಿರುವುದು ಖೇದಕರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಮಾಲ್ ಜೊಕಟ್ಟೆ ಜಿಲ್ಲಾ ಸಮಿತಿ ಸದಸ್ಯರಾದ ಇರ್ಷಾದ್ ಹಳೆಯಂಗಡಿ, ಅಶ್ರಫ್ ಅಡ್ಡೂರು ಭಾಗವಹಿಸಿದರು.

Leave a Reply