August 26, 2025
WhatsApp Image 2025-08-05 at 3.02.33 PM

ಬೆಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಯಿಂದ ಅಸ್ಥಿ ಪಂಜರಗಳ ಶೋಧಕಾರ್ಯಾಚರಣೆ ನಡೆಸಲಾಗುತ್ತಿದೆ. ಇಂದು 6 ಅಡಿ ಅಗೆದರೂ 11ನೇ ಪಾಯಿಂಟ್ ನಲ್ಲಿ ಯಾವುದೇ ಕುರುಹು ದೊರೆತಿಲ್ಲ. ಹೀಗಾಗಿ ಇದರ ಬದಲಾಗಿ ಜಿಪಿಆರ್, ಆಧುನಿತ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ನಟ ಚೇತನ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವಂತ ನಟ ಚೇತನ್ ಅಹಿಂಸಾ ಅವರು, ಇದು ದೊಡ್ಡ ಸುದ್ದಿ — ಸ್ಥಳ 11ರ ಬಳಿಯಲ್ಲಿ ಅಸ್ತಿಪಂಜರ ಭಾಗಗಳು ಮತ್ತು ಸೀರೆ ಪತ್ತೆಯಾಗಿದೆ, ಇದು ಸ್ಥಳ 6ರಲ್ಲಿ ಸಿಕ್ಕಿರುವ ಮೂಳೆಗಳನ್ನು ಸಾಬೀತುಪಡಿಸುತ್ತದೆ ಎಂದಿದ್ದಾರೆ.

ಸತ್ಯವು ಸ್ವಚ್ಛತಾ ಕಾರ್ಮಿಕನ ಕಡೆ ಇದ್ದಂಗೆ ಕಾಣುತ್ತಿದೆ. ತಪಾಸಣೆಯು ಸಂಪೂರ್ಣವಾಗಿರಲು ಗ್ರೌಂಡ್ ಪೆನಿಟ್ರೇಟಿಂಗ್ ರಾಡಾರ್ (GPR) ಮತ್ತು ಇತರ ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಬೇಕೆಂದು ನಾವು ಮನವಿ ಮಾಡಿದ್ದಾರೆ.

ಇನ್ನೊಬ್ಬ ವ್ಯಕ್ತಿ (ಜಯಂತ್ ಟಿ) ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ; ಅವರು ಅಪ್ರಾಪ್ತೆಯನ್ನು ಹೂತಿರೋದನ್ನು ನೇರವಾಗಿ ನೋಡಿದ್ದೇನೆ ಮತ್ತು ಇತರ ಸಾಕ್ಷಿಗಳೂ ಇದ್ದಾರೆ ಎಂದು ಹೇಳಿದ್ದಾರೆ. ಇದು ದೊಡ್ಡ ಸುದ್ದಿ, ಏಕೆಂದರೆ ಇದು ಬೆಂಬಲದ ಸಾಕ್ಷಿಯಾಗಿದೆ. ಇಂತಹ ವಿಟ್ನೆಸ್ಗಳು ಯಾವುದೇ ಭಯಭೀತಿ ಅಥವಾ ಬೆದರಿಕೆಗಳಿಂದ ದೂರವಿರಲು, ಅವರ ರಕ್ಷಣೆ ಕಡ್ಡಾಯವಾಗಬೇಕೆಂದು ನಾವು ಕೇಳಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

About The Author

Leave a Reply