ಪುತ್ತೂರು: ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯ ಶವ ಪತ್ತೆ..!!

ಪುತ್ತೂರು:ತೋಡಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಕೆದಿಲ ಸಮೀಪ ಕಾಂತಕೋಡಿ ಎಂಬಲ್ಲಿ ನಡೆದಿದೆ. ಕಾಂತಕೋಡಿ ನಿವಾಸಿ ರಾಮಣ್ಣ ಗೌಡ ಅವರ ಪತ್ನಿ ಮಮತಾ (35) ಮೃತ ಮಹಿಳೆ.

ಸ್ಥಳೀಯರು ಕೊಲೆಯಾಗಿರುವ ಶಂಕೆ ವ್ಯಕ್ತಪಡಿಸಿದ್ದು ಆಕಸ್ಮಿಕವಾಗಿ ಬಿದ್ದು ಮೃತಪ್ಪಟ್ಟಿದ್ದಾರಾ ಅಥವಾ ಯಾರಾದರೂ ತಳ್ಳಿ ಬಿದ್ದು ಸಾವನ್ನಪ್ಪಿದ್ದಾರಾ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎಂಬ ಮಾಹಿತಿ ತನಿಖೆಯ ಬಳಿಕವಷ್ಟೇ ತಿಳಿಯಬೇಕಿದೆ. ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Reply