ತಂಗಿಯ ಹತ್ಯೆಯ ಪ್ರತೀಕರವಾಗಿ ಭಾವನನ್ನು ಕೊಚ್ಚಿ ಕೊಂದ ಸಹೋದರ

 ಸಹೋದರಿಯ ಹತ್ಯೆಯ ಪ್ರತಿಕಾರವಾಗಿ ಭಾವನ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ತರೀಕೆರೆ ತಾಲೂಕಿನ ಕರಕುಚಿ ಗ್ರಾಮದ ಬಳಿ ಈ ಒಂದು ಭೀಕರ ಕೊಲೆ ನಡೆದಿತ್ತು. ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲೂಕಿನ ಕರಕೋಚಿ ಗ್ರಾಮ ಚರಣ್ (23) ಹತ್ಯೆಗೈದ ಬಾಮೈದ ಸಂತೋಷ ಮತ್ತು ಸಚಿನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

2024ರ ಏಪ್ರಿಲ್ 29ರಂದು ಪತ್ನಿ ಮೇಘನಾಳನ್ನು ಪತಿ ಚರಣ್ ಕೊಂದಿದ್ದ. ಗ್ರಾಮದ ಮೇಘನಾ ಮತ್ತು ಚರಣ್ ಪ್ರೀತಿಸಿ ಮದುವೆಯಾಗಿದ್ದರು. ತನ್ನ ಮನೆ ಬಿಟ್ಟು ತವರು ಮನೆಗೆ ಊರಿಗೆ ಹೋಗಿದ್ದಕ್ಕೆ ಚರಣ್ ಮೇಘನಾಳನ್ನು ಕೊಂದಿದ್ದ. ಬಟ್ಟೆ ತೊಳೆಯಲು ಹೋದಾಗ ಪತ್ನಿಕೊಂದು ಶವ ಕಾಲುವೆಗೆ ಎಸೆದಿದ್ದ. ಚರಣ್ 2024 ಏಪ್ರಿಲ್ 29ರಂದು ಮೊಳಕಟ್ಟಮ್ಮ ಜಾತ್ರೆಯ ದಿನ ಮೇಘನಾ ಕೊಲೆ ನಡೆದಿತ್ತು.

ಬಳಿಕ ಮೂರು ತಿಂಗಳ ಹಿಂದೆ ಚರಣ್ ಜಾಮೀನಿನಿಂದ ಹೊರಗಡೆ ಬಂದಿದ್ದನ್ನು ನೋಡಿ ಮೇಘನಾ ಸಹೋದರ ಕೊಲೆ ಮಾಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನವೇ ಭಾವನನ್ನು ಕೊಲೆಗೈದ ಸಂತೋಷ. ಕರಕೋಚಿ ಗ್ರಾಮಕ್ಕೆ ಬೈಕ್ ಮೇಲೆ ಬಂದು ವಾಪಸ್ ತೆರಳುವಾಗ ಚರಣನನ್ನು ಕೊಲೆ ಮಾಡಲಾಗಿದೆ. ಲಕ್ಕವಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply